ಮೂಡುಬಿದಿರೆ:  ವಾರ್ಷಿಕೋತ್ಸವದ ಅಂಗವಾಗಿ 3.2.23 ಹಗಲು ರಥೋತ್ಸವ ಮಧ್ಯಾಹ್ನ 12.35ಕ್ಕೆ ಭಗವಾನ್ 1008 ಶ್ರೀ ಚಂದ್ರ ಪ್ರಭ ಸ್ವಾಮಿ ರಥರೋಹಣವಾಗಿ ನೆರವೇರಿತು.  ಬಳಿಕ ಸಂಜೆ ಜೈಪುರ್ ರಾಜ ಸ್ಥಾನ ಪ್ರಾಕೃತ ಆಚಾರ್ಯ 108 ಸುನೀಲ್ ಸಾಗರ್ ಮುನಿರಾಜರ ಶುಭಾಶೀರ್ವಾದದೊಂದಿಗೆ 2550 ರ ಭಗವಾನ್ ಮಹಾವೀರ ಸ್ವಾಮಿ ಅಹಿಂಸಾ ರಥ ದೇಶದ ನಾನಾ ಭಾಗಗಳಲ್ಲಿ ಸಂಚಾರ ಮಾಡುತ್ತಿದ್ದು ಜೈನ ಕಾಶಿ ಮೂಡುಬಿದಿರೆಯಲ್ಲಿ ಸ್ವಾಮೀಜಿ ಹಾಗೂ ಗಣ್ಯರು ಸ್ವಾಗತಿಸಿ ಪೂರ್ಣ ಕುಂಭ ಮೆರವಣಿಗೆ ಯಲ್ಲಿ ಶ್ರೀ ಜೈನ ಮಠದಿಂದ ಬಡಗ ಬಸದಿಗೆ ತೆರಳಿ ಮಹಾ ಮಂಗಲ ಆರತಿ ನೆರವೇರಿಸಿದರು ಬಳಿಕ ಜಗದ್ಗುರು ಸ್ವಸ್ತಿಶ್ರೀಡಾ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಪಾವನ ಸಾನ್ನಿಧ್ಯ ದಲ್ಲಿ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

ಆಶೀರ್ವಾದ ನೀಡಿದ ಮೂಡುಬಿದಿರೆ ಸ್ವಾಮೀಜಿ ಅಹಿಂಸಾ ಧರ್ಮ ಸರ್ವ ಜೀವ ದಯಾಪರವಾದ ಧರ್ಮ ಭಗವಾನ್ ಚಂದ್ರಪ್ರಭ ಸ್ವಾಮಿ ಚಲಿಸುವ ಸಮವ ಸರಣ ಧರ್ಮರೂಪಿ ರಥವಾಗಿದೆ ಎಂದು ನುಡಿದರು. ಈ ಸಂಧರ್ಭ ಅಹಿಂಸಾ ರಥ ಸಂಚಾಲಕ ಕುಲದೀಪ್ ಜೈನ್, ಪಟ್ಣ ಶೆಟ್ಟಿ ಸುದೇಶ್, ದಿನೇಶ್, ಆದರ್ಶ್ ಮುಕ್ತೇಸರರು ಕೆ ಪಿ ಜಗದೀಶ್ ಅಧಿಕಾರಿ, ಅಭಯಚಂದ್ರ ಜೈನ್ ಶೈಲೇoದ್ರ ಕುಮಾರ್, ನಿರಂಜನ್ ಜೈನ್ ಉಪಸ್ಥಿತರಿದ್ದರು  ಪದ್ಮಶ್ರೀ ಪ್ರಾರ್ಥನೆ ಹಾಡಿದರು.  ಬಳಿಕ ಧವಳತ್ರಯ ಜೈನ್ ಕಾಶಿ ಟ್ರಸ್ಟ್ (ರಿ ) ಅನನ್ಯ ಭರತ ನಾಟ್ಯ ಮತ್ತು ಮಕ್ಕಿಮನೆ ಕಲಾವಿದರ ವತಿಯಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮ ಜರುಗಿತು ರಾತ್ರಿ ರಥೋತ್ಸವ ಶ್ರೀ ಬಲಿ ಉತ್ಸವ 108 ಕಲಶ ಅಭಿಷೇಕ ಜರುಗಿತು.