ಮಂಗಳೂರು: ನಗರದ ಬಲ್ಮಠ ಸರಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ಜುಲೈ 31ರಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 'ಅಕಾಡೆಮಿಡ್ ಒಂಜಿ ದಿನ ; ಬಲೆ ತುಳು ಓದುಗ' ಕಾರ್ಯಕ್ರಮದಲ್ಲಿ ಭಾಗವಹಿಸುವರು. 'ಅಕಾಡೆಮಿಡ್ ಒಂಜಿ ದಿನ; ಬಲೆ ತುಳು ಓದಗ' ಅಭಿಯಾನದ ಆರನೇ ಕಾರ್ಯಕ್ರಮದ ಉದ್ಘಾಟನೆ ಜು.31 ರಂದು ಬೆಳಿಗ್ಗೆ 10:00 ಗಂಟೆಗೆ ನಡೆಯಲಿದೆ.
ಲೇಖಕ ಹಾಗೂ ತುಳು ಆಕಾಡೆಮಿಯ ಮಾಜಿ ಸದಸ್ಯರಾದ ಮುದ್ದು ಮೂಡುಬೆಳ್ಳೆ ಅವರು ಉದ್ಘಾಟಿಸಿ, ದಿಕ್ಸೂಚಿ ಮಾತನ್ನಾಡುವರು. ಮುಖ್ಯ ಅತಿಥಿಯಾಗಿ ಬಲ್ಮಠ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಗದೀಶ ಬಾಳ ಅವರು ಭಾಗವಹಿಸುವರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸುವರು ಎಂದು ಅಕಾಡೆಮಿಯ ಪ್ರಕಟಣೆ ತಿಳಿಸಿದೆ.