ಸೋಮವಾರ ಬೆಳಿಗ್ಗೆ ನಡೆದ ದೋಣಿಗಳ ಮುಖಾಮುಖಿ ಡಿಕ್ಕಿಯಿಂದಾಗಿ 25 ಜನರು ಮುಳುಗಿ ಸತ್ತ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ.

ಶಿಬ್ಚಾರ್ ಪಟ್ಟಣದ ಸಮೀಪ ಪದ್ಮಾ ನದಿಯಲ್ಲಿ ಈ ದುರ್ಘಟನೆ ನಡೆದಿದೆ. ಮರಳು ಸಾಗಿಸುತ್ತಿದ್ದ ದೊಡ್ಡ ದೋಣಿ ಹಾಗೂ ಜನ ಒಯ್ಯುತ್ತಿದ್ದ ದೋಣಿಗಳ ನಡುವೆ ಡಿಕ್ಕಿ ಆಗಿದೆ.

ಕೂಡಲೆ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ 5 ಜನರನ್ನು ರಕ್ಷಿಸಲಾಗಿದೆ. 25 ಶವಗಳನ್ನು ನೀರಿನಿಂದ ಎತ್ತಲಾಗಿದೆ. ಇನ್ನೂ ಕೆಲವರು ನಾಪತ್ತೆ ಆಗಿರಬಹುದು ಎನ್ನಲಾಗಿದೆ.