ಬಂಟ್ವಾಳ: ವಂ. ಗುರು ವಿನ್ಸೆಂಟ್ ಸಿಕ್ವೇರಾ ಪ್ರಧಾನ ಗುರುಗಳಾಗಿ ದಿವ್ಯ ಬಲಿ ಪೂಜೆಯನ್ನು ಅರ್ಪಿಸಿ ವಾರ್ಷಿಕ ಹಬ್ಬದ ಮಹತ್ವವನ್ನು ತಿಳಿಸಿ ಮೇರಿ ಮಾತೆಯ ಆದರ್ಶದಂತೆ ಇತರರ ಕಷ್ಟದಲ್ಲಿ ಸಹಭಾಗಿಯಾಗಲು ಕರೆ ನೀಡಿದರು.
ಅನೇಕ ಧರ್ಮ ಗುರುಗಳು ಜೊತೆಯಾಗಿ ದಿವ್ಯ ಬಲಿ ಪೂಜೆಯಲ್ಲಿ ಪಾಲ್ಗೊಂಡರು. ಚರ್ಚ್ ಧರ್ಮ ಗುರುಗಳಾದ ವಂ. ಮಾರ್ಕ್ ಡಿಸೋಜರವರು ಹಬ್ಬದ ಯಶಸ್ವಿಗೆ ಕಾರಣರಾದ ಸರ್ವರನ್ನು ಈ ಸಂದರ್ಭದಲ್ಲಿ ಗೌರವಿಸಿದರು. ಊರ ಪರವೂರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು.