(ಜಯಾನಂದ ಪೆರಾಜೆ ಬಂಟ್ವಾಳ)

ಬಂಟ್ವಾಳ: ವಕೀಲರ ಸಂಘ (ರಿ), ಬಂಟ್ವಾಳ ಇದರ 2025-27ನೇ ಸಾಲಿನ ಅಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆ ಶನಿವಾರ ಸಂಘದ ಕಚೇರಿಯಲ್ಲಿ ನಡೆಯಿತು. ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಮರು ಆಯ್ಕೆ ಬಯಸಿ ರಿಚರ್ಡ್ ಕೋಸ್ತಾ ಎಂ. ಸ್ಪರ್ಧೆ ಮಾಡಿ ಬಹುಮತದಿಂದ ಆಯ್ಕೆಯಾಗಿದ್ದಾರೆ. 

ಎರಡನೇ ಬಾರಿಗೆ ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ದಯಾನಂದ ರೈ, ಪ್ರಧಾನ ಕಾರ್ಯದರ್ಶಿಯಾಗಿ ಕೆ. ನರೇಂದ್ರನಾಥ ಭಂಢಾರಿ, ಜೊತೆ ಕಾರ್ಯದರ್ಶಿಯಾಗಿ ಅಕ್ಷತಾ ಶೆಟ್ಟಿ, ಕೋಶಾಧಿಕಾರಿಯಾಗಿ ಜೆಸಿಂತಾ ಕ್ರಾಸ್ತಾ  ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಅಧ್ಯಕ್ಷರ ಚನಾವಣೆಗಾಗಿ 244 ಅರ್ಹ ಮತದಾರರ ಪಟ್ಟಿಯಲ್ಲಿ 222 ಮತಗಳು ಚಲಾವಣೆಯಾಗಿದ್ದು ರಿಚರ್ಡ್ ಕೋಸ್ತಾ ಎಂ. ರವರು 123 ಮತಗಳನ್ನು ಪಡೆದು ಜಯ ಗಳಿಸಿರುತ್ತಾರೆ. ಪ್ರತಿಸ್ಪರ್ಧಿಯಾಗಿ ಪೈಪೋಟಿ ನೀಡಿದ ರಾಜೇಶ್ ಬೊಳ್ಳುಕಲ್ಲು 95 ಮತಗಳನ್ನು ಪಡೆಯಲು ಸಮರ್ಥರಾದರು. ವಕೀಲರಾದ ಎಚ್. ಸತೀಶ್ ರಾವ್ ರವರು ಮುಖ್ಯ ಚುನಾವಣಾಧಿಕಾರಿಯಾಗಿದ್ದರು ಕೆ. ವಿ. ಭಟ್ ಮತ್ತು ಎಂ. ವಿ. ಭಟ್  ಉಪ ಚುನಾವಣಾಧಿಕಾರಿಗಳಾಗಿ ಸೀನಿಯರ್ ಕಮಿಟಿ ಸದಸ್ಯರಾದ ಎಂ. ಈಶ್ವರ ಉಪಾಧ್ಯಾಯರ ಮೇಲುಸ್ತುವಾರಿಯಲ್ಲಿ ಮತದಾನ ಪ್ರಕ್ರಿಯೆ ನಡೆದಿರುತ್ತದೆ.