ನವೀನ ಗೋಪಾಲಸಾ ಹಬೀಬ ಎಮ್ ಎ ಬಿ ಎಡ್
ಅತಿಥಿ ಉಪನ್ಯಾಸಕರು [ ಶಿಕ್ಷಕರು ಪರ್ಲ್ ಪಬ್ಲಿಕ್ ಸ್ಕೂಲ್ ಹರಪನಹಳ್ಳಿ ]
ನೆಚ್ಚಿನ ಓದುಗರೇ ಇಂದಿನ ಪ್ರಸ್ತುತ ಸಮಾಜದಲ್ಲಿ ಒಂದು ಹೊಸ ಬದಲಾವಣೆ ಕಂಡುಬರುತ್ತಿದೆ. ಅದೇನೆಂದರೆ ಇತ್ತೀಚಿನ ಮಕ್ಕಳಿಗೆ ತಂದೆ ತಾಯಿ ಹಾಗೂ ಕುಟುಂಬದ ಮೇಲಿನ ಆಸಕ್ತಿ ಕಡಿಮೆ ಆಗ್ತಾ ಕೊನೆಗೂಳ್ಳೋ ಹಂತಕ್ಕೆ ಬಂದು ತಲುಪುತ್ತಿದೆ.ಮಕ್ಕಳು ತಂದೆ ತಾಯಿಯಿಂದ ಹಣ ಹಾಗೂ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಬಯಸುತ್ತಾರೆ. ಆದರೆ ಅವರ ವ್ಯಯಕ್ತಿಕ ಜೀವನದಲ್ಲಿ ಪಾಲಕರ ಹಸ್ತಕ್ಷೇಪ ಬಯಸುತ್ತಿಲ್ಲ ಮತ್ತು ಸಹಿಸುತ್ತಿಲ್ಲ.. ಇನ್ನು ಕೆಲವು ಮಕ್ಕಳು ತಮ್ಮ ಪಾಲಕರ ಯಾವದೇ ಮಾತುಗಳನ್ನ ಅನುಸರಿಸುತ್ತಿಲ್ಲ.ಮಕ್ಕಳ ಈ ವರ್ತನೆಗಳಿಂದ ಪಾಲಕರು ಬೇಸತ್ತು ಶಾಲಾ ಕಾಲೇಜನ ಸಲಹೆಗಾರರ ಬಳಿ ಹೋಗಿ ತಮ್ಮ ನೋವನ್ನ ಪರಿಸ್ಥಿತಿಯನ್ನ ಹೇಳಿ ಚಡಪಡಿಸುತ್ತಿದ್ದಾರೆ.
ಅಷ್ಟಕ್ಕೂ ಈ ಸಮಸ್ಯೆಗೆ ಕಾರಣವೇನು..?
ತುಂಬಾ ಜನ ಹೇಳೋದನ್ನ ನಾನು ಕೇಳಿದ್ದೇನೆ. ಇಂದಿನ ಮಕ್ಕಳಿಗೆ *ತಾಳ್ಮೆ ಸಮಾಧಾನ ಸಂಯಮ* ಮತ್ತು ತಂದೆ ತಾಯಿ ಮೇಲೆ ಯಾವದೇ ವಿಶೇಷವಾದ ಹೊಂದಾಣಿಕೆಯಾಗಲಿ ಆಸಕ್ತಿಯಾಗಲಿ ಉಳಿದಿಲ್ಲವೆಂದು. ನೀವು ಕೇಳಿರಬಹುದು.
ನನ್ನ ಪ್ರಕಾರ ಈ ಸಮಸ್ಯೆಗೆ ಮುಖ್ಯತಹ ಮೂಲತಃ ಪ್ರಮುಖ ಕಾರಣ ಪಾಲಕರು ಅಂದ್ರೆ ತಂದೆ ತಾಯಿ ಹೌದು ಓದುಗರೇ ಇದು ನಿಜ.ಇಂದಿನ ಕೆಲ ತಂದೆ ತಾಯಿ ಮಕ್ಕಳ ಪ್ರತಿ ಅವರ ಸರಿಯಾದ ಜವಾಬ್ದಾರಿಯನ್ನು ಹೊರುವಲ್ಲಿ ವಿಫಲರಾಗಿರುವದೇ ಇದಕ್ಕೆ ಕಾರಣ. ತಂದೆ ತಾಯಿ ಯೋಚನೆ ಮಾಡ್ತಾರೆ ಮಕ್ಕಳ ಒಳ್ಳೆಯ ಭವಿಷ್ಯಕ್ಕಾಗಿ ನಾವು ಹಣ ಸಂಪಾದನೆ ಮಾಡಬೇಕು. ಅವರಿಗೆ ಒಳ್ಳೇ ಸ್ಕೂಲ್ ಕಾಲೇಜನಲ್ಲಿ ಅಡ್ಮಿಶನ್ ಮಾಡಿಸಬೇಕು. ಅವರ ಎಲ್ಲಾ ಬೇಕೂಬೇಡಿಕೆಗಳನ್ನ ಇಚ್ಛೆಗಳನ್ನ ಸಂಪಾದನೆ ಮಾಡಿದ ಹಣದಿಂದ ಪೂರ್ತಿ ಮಾಡಿದರೆ ನಮ್ಮ ಜವಾಬ್ದಾರಿ ಮುಂದಾಳತ್ವ ಮುಗಿಯಿತೆಂದು ತಿಳಿಯುತ್ತಾರೆ.ಆದರೆ ಅದು ಹಾಗಲ್ಲ.ನಿಮ್ಮ ಈ ಯೋಚನೆಯಿಂದಾನೆ ನಿಮ್ಮ ಮಕ್ಕಳು ನಿಮ್ಮಿಂದ ಇವತ್ತು ದೂರಾಗುತ್ತಾ ಇದ್ದಾರೆ.. ನಿಮ್ಮ ಈ ಯೋಚನೆಯಿಂದಾನೆ ಅವರ ಭಾವನೆಗಳು ಪ್ರತಿದಿನ ನಿಮ್ಮ ಪ್ರತಿ ಕಡಿಮೆ ಆಗ್ತಾ ಅವರು ಒಂದು ಯಂತ್ರದ ರೀತಿಯಲ್ಲಿ ಬದುಕುತ್ತಿದ್ದಾರೆ. ಹಾಗೂ ಅವರಿಗೆ ಅವರ ಸ್ನೇಹಿತರ ಮೇಲೆ ಇರುವಷ್ಟು ಪ್ರೀತಿ ಅಸಕ್ತಿ ಬೆರೆಯುವಿಕೆ ತಮ್ಮ ತಂದೆ ತಾಯಿ ಕುಟುಂಬದ ಮೇಲೆ ಇಲ್ಲಾ..
ನಾನು ಕೆಲ ತಿಂಗಳ ಹಿಂದೆ ಒಂದು ಪ್ರತಿಷ್ಠಿತ ಸ್ಕೂಲ್ ಗೆ ಶಿಕ್ಷಕ ಹುದ್ದೆಯ ಸಂದರ್ಶನಕ್ಕಾಗಿ ಹೋಗಿದ್ದೆ. ಅಲ್ಲಿಯ ಪ್ರಾಚಾರ್ಯರು ತರಗತಿಗೆ ಹೋಗಿದ್ದ ಕಾರಣ ನನಗೆ ಅಲ್ಲಿಯ ಸಿಬ್ಬಂದಿ ಅವರ ಕಚೇರಿಯಲ್ಲಿ ಕೂರಲು ಹೇಳಿದರು. ಆಗಾ ಆ ಸ್ಕೂಲ್ ನಲ್ಲಿ ಮಕ್ಕಳ ದಾಖಲಾತಿ ಅಡ್ಮಿಶನ್ ನಡೆಯುತ್ತಾ ಇತ್ತು. ಹೀಗಿರುವಾಗ ನಾನು ಅಲ್ಲಿ ಇದ್ದ ಸಂದರ್ಭದಲ್ಲಿ ಒಬ್ಬ ಪಾಲಕರು ತಮ್ಮ ಪುಟ್ಟ ಮಗಳನ್ನು ಆ ಸ್ಕೂಲ್ ನಲ್ಲಿ *ಎಲ್ ಕೆ ಜಿ* ಗೇ ದಾಖಲಾತಿ ಮಾಡಿಸಲು ಕರೆದುಕೊಂಡು ಬಂದಿದ್ದರು.ಅವರು ಬಂದು ಕೂತು ದಾಖಲಾತಿಗೇ ಕುಳಿತ ಮೇಡಂ ಅವರಿಗೆ ಹೇಳಿದರು. ಮೇಡಂ ಇವಳು ನಮ್ಮ ಮಗಳು ನಾವು ಇವಳಿಗೆ ಇಲ್ಲೇ *ಎಲ್ ಕೆ ಜಿ* ಗೇ ಅಡ್ಮಿಶನ್ ಮಾಡಿಸಲು ಬಂದಿದ್ದೇವೆ. ಅಂತ ಅದಕ್ಕೆ ಮೇಡಂ ಹೌದಾ ಸರ್ ಆಯ್ತು ನಿಮ್ಮ ಮಗಳ ಡಾಕ್ಯುಮೆಂಟ್ಸ್ ಕೊಡಿ ಅಂತ ಕೇಳಿದ್ರು ಅದಕ್ಕೆ ಅವರು ಮೇಡಂ ಡಾಕ್ಯುಮೆಂಟ್ಸ್ ಕೊಡ್ತೀವಿ ಆದ್ರೇ ಅದಕ್ಕೂ ಮೊದಲು ಇನ್ನೊಂದು ವಿಚಾರ ನಿಮಗೆ ಕೇಳ್ಬೇಕು ಅಂದ್ರು ಅದಕ್ಕೆ ಮೇಡಂ ಹಾ ಹೇಳಿ ಅಂದ್ರು ಆಗಾ ಆ ದಂಪತಿಗಳು ಹೇಳಿದ್ರು. ಮೇಡಂ ನಮ್ಮ ಮಗಳಿಗೆ ಇಲ್ಲೇ *ಹಾಸ್ಟೆಲ್* ನಲ್ಲೆ ಬಿಡ್ತಿವಿ ಅಂದ್ರು. ಅದಕ್ಕೆ ಮೇಡಂ ಅಲ್ಲ ರೀ ಅದು ಇನ್ನು ಪುಟ್ಟ ಮಗು ಅದನ್ನ ಹಾಸ್ಟೆಲ್ ಗೇ ಬಿಡ್ತೀರಾ ಅದು ನಿಮ್ಮಿಂದ ಸಾಧ್ಯನಾ ಅಂತ ಕೇಳಿದ್ರು. ಅದಕ್ಕೆ ಅವರಿಂದ ಬಂದ ಉತ್ತರ ಹಾ ಮೇಡಂ ಬಿಡ್ತೀವಿ ನಿಮ್ಮ ಸ್ಕೂಲ್ ನಲ್ಲೆ ನಮ್ಮ ಮಗಳು ಇದ್ದಾಳೆ ಅವಳು ಈ ವರ್ಷ 3ನೇ ಕ್ಲಾಸ್.. ಅವಳನ್ನ ಇವಳನ್ನ ಒಂದೇ ರೂಮ್ ನಲ್ಲಿ ಹಾಕಿ ಅವಳು ಇವಳನ್ನ ನೋಡ್ಕೋತಾಳೆ ಅಂತ ಹೇಳಿದ್ರು.. ಅವರ ಆ ಮಾತು ಕೇಳಿ ಆ ಮೇಡಂ ಮತ್ತು ನಾನು ಶಾಕ್ ಆದ್ವಿ. ಏನಪ್ಪಾ ಇದು ಅಂತ. ಅವರ ಆ ಮಾತು ಕೇಳಿ ನನಗೆ ತುಂಬಾ ಕೋಪ ಬಂತು ಮೇಡಂ ಗು ಬಂತು ಅದಕ್ಕೆ ಆ ಮೇಡಂ ಅವರಿಗೆ ಹೇಳಿದ್ರು ನೋಡಿ ಸರ್ ಈ ಮಗು ನಾ ನಿಮಗೆ ನೋಡ್ಕೊಳೋಕೆ ಆಗ್ತಾ ಇಲ್ಲಾ. ಇಲ್ಲಿ ಬಂದು ಹಾಸ್ಟೆಲ್ ಗೇ ಹಾಕ್ತಿವಿ ಅಂತಿದೀರಾ ಇನ್ನು ನಿಮ್ಮ ಮಗಳು ಈಗ 3ನೇ ಕ್ಲಾಸ್ ಅವಳು ಚಿಕ್ಕೊಳು ಅವಳು ಹೇಗೆ ನೋಡ್ಕೋಬೇಕು. ನೀವು ಹೇಗೆ ಯೋಚನೆ ಮಾಡ್ತೀರಾ ಅಂತ ಹೇಳಿ. ಇಷ್ಟು ಚಿಕ್ಕ ಮಗುನಾ ಇಲ್ಲಿ ಹಾಸ್ಟೆಲ್ ನಲ್ಲಿ ಇಡೋಕೆ ಆಗೋಲ್ಲ ಅಂತ ಹೇಳಿ ಅವರನ್ನ ಕಳುಹಿಸಿದರು.
ನೋಡಿ ಇನ್ನು ಚಿಕ್ಕದಾಗಿ ಇರೋ ಮಗುನಾ ಪ್ರಪಂಚದ ಸರಿಯಾದ ಜ್ಞಾನ ಇಲ್ಲದ ಮಗುನಾ ತಂದೆ ತಾಯಿ ಬೆಚ್ಚನೆಯ ಅಪ್ಪುಗೆ ಪ್ರೀತಿಯನ್ನ ಬಯಸೋ ಮಗುನಾ ಹಾಸ್ಟೆಲ್ ನಲ್ಲಿ ಬಿಡ್ತಿವಿ ಅಂತ ಬಂದಿದಾರಲ್ಲ ಇವರಿಗೆ ಏನು ಹೇಳ್ಬೇಕು...
ಹೇಳಿ ಪಾಲಕರೇ ನೀವು ಈ ರೀತಿ ಪುಟ್ಟ ಮಕ್ಕಳನ್ನ ಪೂರ್ತಿಯಾಗಿ ಬೋರ್ಡಿಂಗ್ ಸ್ಕೂಲ್ ನಲ್ಲಿ ಹಾಸ್ಟೆಲ್ ನಲ್ಲಿ ಇಟ್ಟು ಶಿಕ್ಷಣ ಕೊಡಿಸುತ್ತ ನಿಮ್ಮಿಂದ ನಿಮ್ಮ ಕುಟುಂಬದಿಂದ ದೂರ ಇಟ್ಟರೆ. ಅವರಿಗೆ ಹೇಗೆ ನಿಮ್ಮ ಮೇಲೆ ನಿಮ್ಮ ಕುಟುಂಬದ ಮೇಲೆ ಪ್ರೀತಿ ಮಮತೆ ಆಸಕ್ತಿ ಇರೋಕೆ ಸಾಧ್ಯ. ಹೇಳಿ.ಉತ್ತರ ಕೊಡಿ. ಯಾವಾಗ ಅವರಿಗೆ ನಿಮ್ಮ ತುಂಬಾ ಅವಶ್ಯಕತೆ ಇತ್ತೋ ಆಗಾ ನೀವು ಅವರನ್ನ ದೂರ ಇಟ್ತ್ರಿ. ಮಕ್ಕಳನ್ನ ಜೊತೆಯಲ್ಲೇ ಇಟ್ಟು ಪ್ರೀತಿ ಮಮತೆ ವಾತ್ಸಲ್ಯ ಸಂಸ್ಕೃತಿ ಸಂಸ್ಕಾರ ಎಲ್ಲಾ ಕೊಟ್ಟು ಒಳ್ಳೇ ಶಿಕ್ಷಣ ಕೊಟ್ಟರೆ ಅವರು ಅವರ ಪ್ರೀತಿ ಎಲ್ಲಾ ಯಾವತ್ತೂ ನಿಮ್ಮ ಜೊತೆಗೆ ಇರುತ್ತೆ. ಅದನ್ನ ಬಿಟ್ಟು ಅವರು ಚಿಕ್ಕೋರು ಇರುವಾಗಲೇ ಅವರನ್ನ ಹಾಸ್ಟೆಲ್ ನಲ್ಲಿ ಹಾಕಿ...ಅವರ ಭಾವನೆಗಳನ್ನ ಕೊಂದೋರೆ ನೀವು.. ಈಗ ನಮ್ಮ ಮಕ್ಕಳಿಗೆ ನಮ್ಮ ಮೇಲೆ ಪ್ರೀತಿ ಇಲ್ಲಾ ಅವರಿಗೆ ತಂದೆ ತಾಯಿ ಕುಟುಂಬ ಅಂದ್ರೆ ಕೀಳರಿಮೆ ಅಂತ ಕಣ್ಣೀರು ಹಾಕೋರು ನೀವೇ... ಅವರ ಆ ವರ್ತನೆಗೇ ಕಾರಣ ನೀವೇ....
ನಾನು ಒಂದಿನ ಬಸ್ನಲ್ಲಿ ಹುಬ್ಬಳ್ಳಿಗೇ ಹೋಗುತ್ತಾ ಇದ್ದೆ. ಅವತ್ತು ಬಸ್ ತುಂಬಾ ಭರ್ತಿಯಾಗಿತ್ತು. ಒಂದು ಸೀಟ್ ಕೂಡ ಇರಲಿಲ್ಲ. ಹೀಗಿರುವಾಗ ಒಬ್ಬ ತಾಯಿ ಮಗಳು ಆ ಬಸ್ ನಲ್ಲಿ ಇದ್ದರು. ಮಗಳು 18ರಿಂದ 20ವರ್ಷದವಳು. ಗದಗ ಇಂದ ಬಸ್ ಹುಲಕೋಟಿ ಗೇ ಬಂದಿತ್ತು ಅಷ್ಟೇ.. ಮಗಳು ಅಮ್ಮ ನನಗೆ ನಿಲ್ಲೋಕೆ ಆಗ್ತಾ ಇಲ್ಲಾ.. ನಾನು
ಕುಟ್ಕೊಳ್ತಿನಿ ನೀನು ನಿಂತ್ಕೋ ಅಂತ ಹೇಳಿದ್ಲು. ಅದಕ್ಕೆ ಅವರ ಅಮ್ಮ ಮಗಳೇ ನೀನು ಇದರಲ್ಲೇ ಅಡ್ಜಸ್ಟ್ ಮಾಡ್ಕೊಂಡು ನನ್ನ ಪಕ್ಕಾ ಕುತ್ಕೋ ಅಂದ್ರು ಅದಕ್ಕೆ ಅವಳು ಇಲ್ಲ ನನಗೆ ಆಗೋಲ್ಲ ನಿನ್ ಏಳು ಅಂತ ಹೇಳಿ ಎಬ್ಬಿಸಿದಳು. ಅವರ ತಾಯಿಗೆ ನಿಲ್ಲಿಸಿ ತಾನು ಕೂತಳು. ಅದನ್ನ ನೋಡಿ ನನಗೆ ತುಂಬಾ ಆಶ್ಚರ್ಯ ಅಂತ ಅನ್ನಿಸ್ತು..ಆಮೇಲೆ ನಾನು ನನ್ನ ಸೀಟ್ ನ ಆ ತಾಯಿಗೆ ಕೊಟ್ಟು ನಾನು ಡ್ರೈವರ್ ಪಕ್ಕಾ ಹೋಗಿ ಕುತ್ಕೊಂಡೆ.. ಅವತ್ತು ನನಗೆ ಆ ಸನ್ನಿವೇಶ ನೋಡಿ ಇವರು ಮಗಳನ್ನ ಸರಿಯಾಗಿ ಬೆಳೆಸಿಲ್ಲ ಅಂತ ಅನ್ನಿಸ್ತು ಅಷ್ಟೇ.. ಆದರೆ ಯಾವಾಗ ನಾನು ಸ್ಕೂಲ್ ನಲ್ಲಿ ಚಿಕ್ಕ ಮಗುವನ್ನ ಹಾಸ್ಟೆಲ್ ನಲ್ಲಿ ಬಿಡೋ ಸನ್ನಿವೇಶ ನೋಡಿದನೋ ಆಗಾ ಇದಕ್ಕೆ ಉತ್ತರ ದೊರೆಯಿತು...
ಮತ್ತೊಂದು ಸನ್ನಿವೇಶ ನಾನು ತುಂಬಾ ವರುಷಗಳ ಹಿಂದೆ ಟಿ ವಿ ನ್ಯೂಸ್ ನಲ್ಲಿ ನೋಡಿದ್ದೆ. ಒಬ್ಬ ಶ್ರೀಮಂತ ದಂಪತಿಗಳು ಕಾರ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರಿಗೆ ಇಬ್ಬರು ಮಕ್ಕಳು ಒಂದು ಹೆಣ್ಣು ಒಂದು ಗಂಡು. ತಂದೆ ತಾಯಿಗೇ ಆಕ್ಸಿಡೆಂಟ್ ಆಗಿ ಸತ್ತೋಗಿರೋ ಸುದ್ದಿ ಕೇಳಿದಾಗಿಂದ ಹಿಡಿದು ಅವರ ಎಲ್ಲಾ ಕಾರ್ಯಗಳು ಮುಗಿಯೋವರೆಗೂ ಅವರ ಕಣ್ಣಲ್ಲಿ ಒಂದು ಹನಿ ನೀರು ಕೂಡ ಬಂದಿಲ್ಲ ಅಂತ... ಆಮೇಲೆ ಯಾಕೆ ಹಾಗೆ ಅಂತ ನೋಡಿದಾಗ ಗೊತ್ತಾಗಿದ್ದು... ಆ ದಂಪತಿಗಳು ಆ ಮಕ್ಕಳು ಹುಟ್ಟಿದಾಗಿಂದ ಹಿಡಿದು ಅಷ್ಟು ದೊಡ್ಡವರಾದರೂ ಅವರನ್ನ ಆಯಾ ಮನೆಯಲ್ಲಿ ಹಾಸ್ಟೆಲ್ ನಲ್ಲಿ ಇಟ್ಟೆ ಬೆಳೆಸಿದ್ದರು ಅಂತ... ಅದಕ್ಕೆ ಅವರಿಗೆ ತಂದೆ ತಾಯಿ ಅಂದ್ರೆ ಏನು ಅವರ ಮಹತ್ವ ಏನು ಚೂರು ಗೊತ್ತಿರಲಿಲ್ಲ ಅಂತೇ... ಇದಕ್ಕೂ ಕಾರಣ ಅದೇ ಮಕ್ಕಳನ್ನ ಪೂರ್ತಿಯಾಗಿ ಹಾಸ್ಟೆಲ್ ನಲ್ಲಿ ಇಟ್ಟು ಬೆಳೆಸೋದು..ಪಾಲಕರು ಮಕ್ಕಳಿಗೆ ಹಾಸ್ಟೆಲ್ ನಲ್ಲಿ ಇಟ್ಟರೆ. ಮುಂದೆ ಅದೇ ಮಕ್ಕಳು ಅವರನ್ನ ವೃದ್ಧಶ್ರಮದಲ್ಲಿ ಇಡುತ್ತಾರೆ ಅಷ್ಟೇ.
ಇನ್ನು ಬೇಕಿದ್ರೆ ಪಿ ಯು ಸಿ ಪದವಿವರೆಗೂ ಜೊತೆಯಲ್ಲಿ ಬೆಳೆಸಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೇರೆ ಕಡೆ ಕಳುಹಿದರೆ ಹಾಸ್ಟೆಲ್ ಕಳುಹಿಸಿದರೆ ಇಷ್ಟು ಸಮಸ್ಯೆಯಾಗುವದಿಲ್ಲ..
ಇದಕ್ಕೆ ಪರಿಹಾರ ನೀವು ನಿಮ್ಮ ಮಕ್ಕಳನ್ನು ನಿಮ್ಮ ಜೊತೆಯಲ್ಲಿ ಇಟ್ಟು ಒಳ್ಳೇ ಶಿಕ್ಷಣ ಸಂಸ್ಕಾರ ಪ್ರೀತಿ ಸಮಯ ಕೊಟ್ಟು ಬೆಳೆಸಿ... ನೀವು ಹೀಗೆ ಬೆಳೆಸಿದ್ದೆ ಆದರೆ ನಿಮ್ಮ ಮಕ್ಕಳು ಕೊನೆಯವರೆಗೂ ನಿಮ್ಮನ್ನ ಅಪಾರವಾದ ಪ್ರೀತಿ ಗೌರವ ಕೊಟ್ಟು ನೋಡಿಕೊಳ್ಳುತ್ತಾರೆ...