ಚಿತ್ರದುರ್ಗದ ಮುರುಘಾ ಮಠದವರು ನೀಡುವ ಪ್ರತಿಷ್ಟಿತ ಬಸವಶ್ರೀ ಪ್ರಶಸ್ತಿಗೆ ದಿವಂಗತ ಪುನೀತ್ ರಾಜ್‍ಕುಮಾರ್ ಅವರ ಹೆಸರನ್ನು ಶಿವಮೂರ್ತಿ ಮುರುಘಾ ಶರಣರು ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಪ್ರಕಟಿಸಿದರು.

ನಟ, ಗಾಯಕ, ನಿರ್ಮಾಪಕ ಎಂಬುದಷ್ಟಲ್ಲದೆ ನಾನಾ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಪುನೀತ್ ರಾಜ್‍ಕುಮಾರ್ ಅವರಿಗೆ ಬರುವ ಬಸವ ಜಯಂತಿಯಂದು ಮರಣೋತ್ತರ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಬಸವಶ್ರೀ ಪ್ರಶಸ್ತಿಯು ರೂಪಾಯಿ ಐದು ಲಕ್ಷ ನಗದು ಒಳಗೊಂಡಿದೆ.