ಬೆಂಗಳೂರಿನ ಥಿಂಕ್ ಟ್ಯಾಂಕ್ ಪಬ್ಲಿಕ್ ಅಫೇರ್ಸ್ ಸೆಂಟರ್ ರಾಜ್ಯಗಳ ಈ ಬಾರಿಯ ಸಾಧನಾ ಮಟ್ಟ ಹೊರಗಿಟ್ಟಿದ್ದು ಕೇರಳವು ಸತತ ಐದನೆಯ ವರುಷ ಮೊದಲ ಸ್ಥಾನದಲ್ಲಿ ಉಳಿದಿದ್ದರೆ, ದೊಡ್ಡ ರಾಜ್ಯಗಳಲ್ಲಿ ಉತ್ತರ ಪ್ರದೇಶವು ಕೊನೆಯ ಸ್ಥಾನಕ್ಕೆ ಉರುಳಿದೆ.
ಅಭಿವೃದ್ಧಿ, ಸುಸ್ಥಿರತೆ, ನೀತಿ ಮೊದಲಾದವುಗಳ ಆಧಾರದಲ್ಲಿ ಈ ಸೂಚ್ಯಂಕ ನೀಡಲಾಗುತ್ತದೆ. ಯೋಗಿ ಆದಿತ್ಯನಾಥ ಮುಖ್ಯಮಂತ್ರಿ ಆಗುವುದಕ್ಕೆ ಮುಂಚೆ ಉತ್ತರ ಪ್ರದೇಶವು ಬಿಹಾರ, ಮಧ್ಯ ಪ್ರದೇಶದಂಥ ರಾಜ್ಯಗಳಿಗಿಂತ ಉತ್ತಮವಿತ್ತು. ಈಗ ದೊಡ್ಡ ರಾಜ್ಯಗಳಲ್ಲಿ ಕೊನೆಯದಾದ 18ನೇ ಸ್ಥಾನಕ್ಕೆ ಜಾರಿದೆ.