ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೂನ್ 4 ರಂದು ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟ ಹೆಬ್ರಿ ತಾಲೂಕು ಕುಚ್ಚುರು ರಸ್ತೆ ಮದಗದ ಮನೆ ನಿವಾಸಿ ಚಿನ್ಮಯಿ ಶೆಟ್ಟಿ ವಾರಸುದಾರರಾದ ಕೆ.ಕರುಣಾಕರ ಶೆಟ್ಟಿ ಅವರಿಗೆ  ಮಾನ್ಯ ಮುಖ್ಯಮಂತ್ರಿಗಳು ಘೋಷಿಸಿರುವ ಪರಿಹಾರದ ಮೊತ್ತ  25 ಲಕ್ಷ ರೂ. ಗಳ ಚೆಕ್ ಅನ್ನು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಇಂದು ಹಸ್ತಾಂತರಿಸಿ, ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಸಹಾಯಕ ಕಮಿಷನರ್ ರಶ್ಮಿ ಕೆ, ತಹಶೀಲ್ದಾರರು, ಕುಟುಂಬ ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.