ಜರ್ಮನಿಯ ರಾಜಧಾನಿ ಬರ್ಲಿನ್‌ನ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಚಾನ್ಸಲರ್ ಏಂಜೆಲಾ ಮೆರ್ಕೆಲ್‌ರ ಪಕ್ಷ ಸೋಲುಂಡು ಎಡ ಮಧ್ಯಮವಾದಿ ಸೋಶಿಯಲ್ ಡೆಮಾಕ್ರಟಿಕ್ ಪಕ್ಷವು ಬಹುಮತ ಸಾಧಿಸಿದೆ.
ಬರ್ಲಿನ್ ನಗರವು ಇದೇ ಮೊದಲ ಬಾರಿಗೆ ಮಹಿಳಾ ಮೇಯರ್ ಕಾಣಲಿದೆ. 43 ವರುಷದ ಫ್ರಾಂಜಿಸ್ಕಾ ಗಿಫೆಯವರು ಮೇಯರ್ ಸ್ಥಾನಕ್ಕೆ ಗೆದ್ದ ಪಕ್ಷದ ಅಭ್ಯರ್ಥಿಯಾಗಿರುವರು.
ಹಿಂದೆ ಮೆರ್ಕೆಲ್ ಸಂಪುಟದಲ್ಲಿ ಇದ್ದ ಇವರು, ಡಾಕ್ಟರೇಟ್ ಪ್ರಬಂಧ ಕದ್ದ ಆರೋಪದ ಮೇಲೆ ಮಂತ್ರಿ ಪದವಿಗೆ ರಾಜೀನಾಮೆ ನೀಡಿ ಸೋಶಿಯಲ್ ಡೆಮಾಕ್ರಟಿಕ್ ಪಕ್ಷ ಸೇರಿದ್ದರು.