ತುಮಕೂರಿನಿಂದ ಬೆಂಗಳೂರಿಗೆ ಬರುವ ರೈತರನ್ನು ತಡೆಯಲು ಗೊರಗುಂಟೆಪಾಳ್ಯದಲ್ಲಿ ಕಾದಿದ್ದ ಡಿಸಿಪಿ ಧರ್ಮೇಂದ್ರ ಕುಮಾರ್ ಎಡಗಾಲು ಪಾದದ ಮೇಲೆ ಒಬ್ಬನು ಕಾರು ಹತ್ತಿಸಿ ಸಿಕ್ಕಿಬಿದ್ದಿದ್ದಾನೆ.

ರೈತರ ಮೆರವಣಿಗೆ ಬರುತ್ತಿದ್ದ ಕಡೆಯಿಂದ ಕಾರೊಂದು ವೇಗವಾಗಿ ಬರುತ್ತಿತ್ತು. ‌ಡಿಸಿಪಿ ಅದನ್ನು ನಿಲ್ಲಿಸಲು ಮುಂದೆ ಹೋದಾಗ ಕಾರು ಅವರ ಎಡಗಾಲಿನ ಪಾದದ ಮೇಲೆ ಹಾಯಿತು.

ಇತರ ಪೋಲೀಸರು ಕಾರು ತಡೆದು ಚಾಲಕನನ್ನು ಬಂಧಿಸಿದರು. ಆತನು ರೈತ ಚಳವಳಿಗೆ ಸಂಬಂಧಿಸಿದವನಲ್ಲ ಎಂದು ತಿಳಿದು ಬಂದಿದೆ.

ಡಿಸಿಪಿ ಧರ್ಮೇಂದ್ರ ಕುಮಾರ್ ಅವರ ಪಾದದ ಎಲುಬಿಗೆ ಏಟಾಗಿದೆ. ಆದರೂ ಪ್ರಥಮ ಚಿಕಿತ್ಸೆ ಪಡೆದು, ಕುಳಿತು ಸುಧಾರಿಸಿಕೊಂಡು ಕರ್ತವ್ಯ ನಿರ್ವಹಿಸಿದರು.