ಆ ದಿನ ಖುಷಿಯಿಂದ ಸ್ನೇಹಿತೆಗೆ ಫೋನ ಮಾಡದೆ ಹ್ಯಾಪಿ ಮ್ಯಾರೇಜ್ ಆನಿವರ್ಸ ಡೇ ಡಿಯರ್ ಅಂತ...

ಆ ಕಡೆಯಿಂದ ಅವಳ ಮೆತ್ತನೆಯ ದನಿ  ನನ್ನದು  ಡೈವೊರ್ಸ ಆಗಿದೆ ಅಂದಳು ಏನ ಹೇಳಬೇಕೊ ತಿಳಯದೆ ಮೌನಿಯಾದೆ ನಾ ಅವಳ ಹೇಳಿದ್ಲು ನಿಂಗೊತ್ತೆ ಇದೆ ನಮ್ಮನೆಲಿ ನಾ ಹೇಗಿದ್ದೆ ಅಂತ.ಇಷ್ಟಾ ಬಂದ ಹಾಗೆ ಶಾಪಿಂಗ್ ಮಾಡತಿದ್ದೆ ಆದ್ರೆ ಇಲ್ಲಿ ಚಿಕ್ಕ ಖರ್ಚಿಗೂ ಕೈಚಾಚಬೇಕು ನಾನೇ ಕೆಲಸಕ್ಕೆ ಹೋಗತಿನೆಂದರೆ ಕೆಲಸಕ್ಕೆ ಬೇಡಾ ಮನೆ ನೋಡೊಕೊ ಅಮ್ಮ ಮಗುನಾ ನೊಡಕೊ ಅಂತ.ನಂದೇ ಆದ ಲೈಫ್ ಅಂತಾ ಇಲ್ವಾ ನಾನ್ಯಾಕೆ ಆಳಿನ ತರಹ ಬದುಕಲಿ ಸ್ವಾತಂತ್ರ್ಯ ಕಳೆದು ಹೋಗಿತ್ತು ಮದುವೆ ಬಂಧನದಿಂದ ಯಾವತ್ತೂ ಬಿಡುಗಡೆ ಸಿಗುತ್ತೊ ಅಂತಾ ಅನಿಸುತ್ತಿತ್ತು ಎಂದು ಹೇಳತಾ ಹೊದಳು...

ಅವಳೇ ಹೇಳಿದ್ಲು ಆಮೇಲೆ ಕಾಲ್ ಮಾಡತಿನಿ ಬಾಯ್ ಅಂತ ಕಾಲ್ ಕಟ್ ಮಾಡಿದ್ಲು, ಮನಸ್ಸು ತುಂಬಾ ಬೇಸರ ಹೀಗೇಕಾಯ್ತು ಅವರು  ಒಬ್ಬರನ್ನೊಬ್ಬರು ಇಷ್ಟಾಪಟ್ಟು ಪ್ರೀತಿಸಿನೇ ಮದುವೆನು ಆಗಿದ್ದರೂ ಅವನು ಕೂಡ ಒಳ್ಳಯವನೇ ಒಳ್ಳೆ ಕುಟುಂಬವಾಗಿತ್ತು... ಎನ್ನುವ ಯೋಚನೆಯಲ್ಲೆ ನಾನು ಹೀಗೆ ನನ್ನ ಮನಸ್ಸು ಒಂದಲ್ಲ ಒಂದು ಯೋಚನೆಲಿ ಗೊಂದಲದ ಗೂಡಾಗಿ ಹೊಯಿತು.

ಸಂಬಂಧಗಳು ಕ್ಷಿಣಿಸುತ್ತಿವೆ ತಾಳ್ಮೆ ಹೊಂದಾಣಿಕೆ ಎಂಬ ಪದವೇ ಮರೆತಂತಿದೆ.ಅಜ್ಜಿ ಅಮ್ಮ ಅತ್ತೆ ಚಿಕ್ಕಮ್ಮಗಳೆಲ್ಲರ ಮದುವೆಯ ಬಂಧನದಲ್ಲಿ ಅದೇಷ್ಟು ತಾಳ್ಮೆ ಪರಸ್ಪರ ಗೌರವ ಹೊಂದಾಣಿಕೆಯಿಂದ ಬದುಕಿ ಬಾಳಿದವರನ್ನೆ ನೋಡಿ ಅವಳ ಮಧ್ಯ ಬೆಳೆದವಳು ನಾನು ಈ ವಿಚ್ಛೆದನಗಳಂತ ಮಾತುಗಳು ನನಗೆ ತೀರಾ ಹೊಸತು...ಅಷ್ಟಕ್ಕೂ ಇದು ಟ್ರೇಂಡ್ ಆಗಿಬಿಟ್ಟಿದೆ ಸಂಬಂಧಗಳು ಇಲ್ಲಿ ಕ್ಷುಲ್ಲಕ ಕಾರಣಕ್ಕೆ ಯಾವ ಕ್ಷಣದಲ್ಲಾದರೂ ಮುರಿದು ಬಿಳುತ್ತದೆ. ನೆನಪಿರಲಿ ಇಲ್ಲಿ ಯಾರು ಪರಿಪೂರ್ಣರಲ್ಲ ನಮ್ಮಲ್ಲಿರುವ ಒಳ್ಳೆತನಕ್ಕಿಂತ ಹೆಚ್ಚು ಒಳ್ಳೆತನ ಇನ್ನೊಬ್ಬರಲ್ಲಿ ಹುಡುಕುವುದಕ್ಕೂ ಹೋಗಬಾರದು. ತಾಳ್ಮೆ ಎನ್ನುವುದು ಅದಾವ ಕಡಲಲ್ಲಿ ಮುಳುಗಿದೆಯೊ ಮನುಷ್ಯನ ತನ್ನ ಕೋಪದಿಂದ ತನ್ನನ್ನು ತಮ್ಮ ಸುತ್ತಲೂ ದಹಿಸಿಬಿಡುತ್ತಾರೆ... ಪ್ರತಿಯೊಬ್ಬರಲ್ಲೂ ಹುಳುಕು ಹುಡುಕುತ್ತಾ ಹೋದರೆ ನಮ್ಮ ಮನಸ್ಸೆ ಕೊಳಕಾಗುತ್ತದೆ...

ಯಾವುದೇ ಸಂಬಂಧಗಳಿಗೆ ಸಮಯ ಕೊಡಬೇಕು. ಹೊಂದಣಿಕೆನೆ ಬದುಕು.ಸಣ್ಣ ಸಣ್ಣ ಮಾತುಗಳನ್ನ ಸಮಸ್ಯೆ ಎಂದುಕೊಂಡರೆ ಸಂಬಂಧಗಳ ಸಂಹಾರ ನಿಶ್ಚಿತ ಅಂತ... ಇಲ್ಲಿ ಪತಿ ಪತ್ನಿಯರಲ್ಲಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು ಅವಶ್ಯ ಪರಸ್ಪರ ನಂಬಿಕೆ ಮುಖ್ಯ. ಯಾವುದೇ ಬಂಧನ ಗಟ್ಟಿಯಾಗಿ ಉಳಿಯುವುದಕ್ಕೆ ಸಮಯ ನಂಬಿಕೆ ಪ್ರೀತಿಯು ಬೆರೆತಿರಬೇಕು.ಮರಳು ಮುಷ್ಠಿಯಲ್ಲಿ ಗಟ್ಟಿಯಾಗಿ ಹಿಡಿದಿಟ್ಟಂತೆ ಅದು ಕೈಜಾರಿ ಹೋಗುವುದು...ಸ್ವಾತಂತ್ರ್ಯ ಅಂದರೆ ತೀರಾ ಆಗಲೂಬಾರದು ಎಲ್ಲದಕ್ಕೂ ಮಿತಿ ಇರುತ್ತದೆ ಯಾವುದು ಅತಿಯಾಗದಂತಿರಬೇಕಲ್ವಾ...

ಅವಳ ಬಗ್ಗೆ ಯೋಚಿಸಿದಷ್ಟು ಯಾಕೊ ಬೇಸರ ನನ್ನ  ಮನಸನ್ನಾವರಿ ಬಿಟ್ಟಿತ್ತು. ಮತ್ತೆ ಅವಳದೆ ಫೋನ್ " dont worry im ok"

ನಿಜಾ ಹೇಳಬೇಕೆಂದ್ರೆ ಆವಾಗಿಂತ ಈವಾಗೇ ಖುಷಿಯಾಗಿದ್ದಿನೆಂದೂ ಬಂಧನದಿಂದ ಬಿಡುಗಡೆಯಾದ ಹಕ್ಕಿಯಂತಾಗಿದ್ದಿನಿ ಅಂದಳು...

ಸ್ವಾತಂತ್ರ್ಯ ಮದುವೆ ಬಂಧನಗಳ ಸರಿಯಾಗಿ ಅರ್ಥ ಮಾಡಕೊಳ್ಳದೆ ತನ್ನ ಬದುಕನ್ನೆ ಬೆಂಕಿ ಹಚ್ಚಿಕೊಂಡವಳಿಗೆನು ಹೇಳಲಿ ಅವರವರ ಬದುಕು ಅವರವರ ಕೈಯಲ್ಲಿ ಹೊಂದಾಣಿಕೆಯೇ ಇಲ್ಲವೆಂದಾಗ ಕ್ಷಮಿಸುವ ಗುಣವೇ ನಮ್ಮಲ್ಲಿ ಇಲ್ಲವಾದಾಗ ಕೊನೆಗೆ ನಮಗಾಗಿ ಯಾವ ಸಂಬಂಧನು ಉಳಿಯುವುದಿಲ್ಲ...

- ಅಂಜಲಿ ಶಿದ್ಲಿಂಗ್