ಕಾರ್ಕಳ: ಭಾರತೀಯ ಕಂಪೆನಿ ಸೆಕ್ರೆಟರಿ ಮಂಡಳಿಯವರು  ನಡೆಸಿದ ರಾಷ್ಟ್ರಮಟ್ಟದ ಕಂಪೆನಿ ಸೆಕ್ರೆಟರಿಯ ಪ್ರವೇಶ ಪರೀಕ್ಷೆ-2025 (ಸಿಎಸ್‍ಇಇಟಿ) ಯಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್  ಪದವಿಪೂರ್ವ ಕಾಲೇಜಿನ ನಾಲ್ಕು ವಿದ್ಯಾರ್ಥಿಗಳು ಪ್ರಥಮ ಪ್ರಯತ್ನದಲ್ಲಿಯೇ ಉತ್ತೀರ್ಣರಾಗಿದ್ದಾರೆ. 

ಸಂಸ್ಥೆಯಿಂದ ಒಟ್ಟು 11 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ ಏಳು ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಸಂಸ್ಥೆಯು ಅಭೂತಪೂರ್ವ ಸಾಧನೆ ಗೈದಿದೆ. ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಜೇಡನ್ ಕುವೆಲ್ಲೊ  (171/200), ಜಿತೇಶ್ ಪಿಂಟೊ (147/200), ಸಿಯಾ ಕ್ಯಾರೊಲ್ ಡಿಕ್ರೂಸ್ (123/200), ಮಹಿಪಾಲ್ ಸಿಂಗ್ (119/200) ಸ್ವಸ್ತಿಕ್ ಎಸ್ ಪೂಜಾರಿ (118/200), ನಿರಾಲಿ ಜೈನ್ (100/200), ಶ್ರಾವ್ಯ (100/200)  ಉತ್ತೀರ್ಣರಾದ ವಿದ್ಯಾರ್ಥಿಗಳಾಗಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳು ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ಸಿಎ ಮತ್ತು ಸಿಎಸ್ ತರಬೇತಿ ತಂಡದಿಂದ ತರಬೇತಿಯನ್ನು ಪಡೆದುಕೊಂಡಿದ್ದರು. ಸಂಸ್ಥೆಯ ಆಡಳಿತ ಮಂಡಳಿಯವರು, ಪ್ರಾಚಾರ್ಯರು, ತರಬೇತಿ ನೀಡಿದ ಉಪನ್ಯಾಸಕ ತಂಡ ಹಾಗೂ ಸಂಸ್ಥೆಯ ಬೋಧಕ ವರ್ಗದವರು ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.