ಕಾರ್ಕಳ: ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಬಾಡಿಗೆಗಾಗಿ ಸುಮಾರು 850 ರಿಕ್ಷಾಗಳು ಚಲಾಯಿಸುತ್ತಿದ್ದು, ಕಾನೂನುಬದ್ಧವಾಗಿ ತಮ್ಮ ಕರ್ತವ್ಯವನ್ನು ಕಸುಬನ್ನು ನಿರ್ವಹಿಸುತ್ತಿದ್ದಾರೆ. ಈ ಮಧ್ಯ ಪುರಸಭಾ ವ್ಯಾಪ್ತಿಯ ಬಹುತೇಕ ರಸ್ತೆಗಳು ಶಿಥಿಲಗೊಂಡಿರುತ್ತದೆ. ಈ ಬಗ್ಗೆ ಆಟೋ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘವು ಪುರಸಭಾ ಮುಖ್ಯಾಧಿಕಾರಿ ಹಾಗೂ ಆಡಳಿತ ಮಂಡಳಿಗೆ ಸೆಪ್ಟೆಂಬರ್ 29 ರಂದು ರಸ್ತೆ ದುರಸ್ತಿ ಮಾಡುವಂತೆ ಮನವಿಯನ್ನು ನೀಡಿದ್ದು, ಸದ್ರಿ ಮನವಿ ಸ್ವೀಕರಿಸಿದ ಅಧಿಕಾರಿಗಳು ಒಂದು ತಿಂಗಳ ಒಳಗೆ ರಸ್ತೆ ದುರಸ್ತಿ ಮಾಡಿಕೊಡುವುದಾಗಿ ಆಶ್ವಾಸನೆ ನೀಡಿರುತ್ತಾರೆ. ಆದರೆ ಒಂದು ತಿಂಗಳು ಕಳೆದರೂ ಶಿಥಿಲಗೊಂಡ ಮುಖ್ಯ ಸಾರ್ವಜನಿಕ ರಸ್ತೆಯಾದ ಆನಂತಶಯನದಿಂದ ತೆಳ್ಳಾರು, ಗುಡ್ಡೆಯಂಗಡಿಯ ಕಾರ್ಕಳ ನಗರದ ಹೆಚ್ಚಿನ ಕಡೆಗಳಲ್ಲಿ ಸಂಪೂರ್ಣ ರಸ್ತೆ ಈಗಲೂ ಹೊಂಡ-ಗುಂಡಿಗಳಿಂದ ತುಂಬಿದ್ದು, ಹಿರಿಯ ನಾಗರೀಕರು, ಅನಾರೋಗ್ಯ ಪೀಡಿತ ವ್ಯಕ್ತಿಗಳು ನಿರಂತರ ಚಲಿಸುವ ಈ ರಸ್ತೆಯಲ್ಲಿ ದ್ವಿಚಕ್ರ ವಾಹನ, ಆಟೋರಿಕ್ಷಾ ಚಾಲಕರು ಮಾಲಕರು ಸುಮಾರು 8 ತಿಂಗಳಿಂದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಅವರು ಗುರುವಾರ ಕಾರ್ಕಳ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ "ಆಡಳಿತ ತಕ್ಷಣವೇ ರಸ್ತೆ ಹೊಂಡಗುಂಡಿಗಳನ್ನು ಮುಚ್ಚುವಂತೆ ಬಾಲಕೃಷ್ಣ ಶೆಟ್ಟಿ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಉಪಾಧ್ಯಕ್ಷ ವಿಶ್ವನಾಥ ಭಂಡಾರಿ, ಪ್ರಧಾನ ಕಾರ್ಯದರ್ಶಿ ಅಣ್ಣಿ ಮಡಿವಾಳ, ಕಾರ್ಯದರ್ಶಿ ಹರೀಶ್ ದೇವಾಡಿಗ, ಕೋಶಾಧಿಕಾರಿ ಅರುಣ್ ಕಿಣಿ, ಸಂಘಟನಾ ಕಾರ್ಯದರ್ಶಿ ಸಂತೋಷ್ ರಾವ್ ಉಪಸ್ಥಿತರಿದ್ದರು.