ವಾರ ವಿಶ್ರಾಂತಿಯ ಬಳಿಕ‌ ಜನವರಿ 3ರ ಬೆಳಿಗ್ಗೆ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಭಾರತ್ ಜೋಡೋ ದಿಲ್ಲಿಯಿಂದ ಹೊರಟಿತು. ಇದೇ ವೇಳೆಗೆ ಅಯೋಧ್ಯೆಯ ರಾಮ ಜನ್ಮ ಭೂಮಿಯ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್‌ರಿಂದ ಪತ್ರವೊಂದು ರಾಹುಲ್‌ರನ್ನು ತಲುಪಿದೆ.

Image courtesy

ರಾಮನ ಆಶೀರ್ವಾದ ಸದಾ ನಿಮಗಿದೆ. ಯಾತ್ರೆಗೆ ಶುಭವಾಗಲಿ ಎಂದೆಲ್ಲ ಸಾಮಾನ್ಯ ವಿಚಾರಗಳ ಪತ್ರವದು. ಇಂದು ಮಧ್ಯಾಹ್ನ ಭಾರತ್ ಜೋಡೋ ಯಾತ್ರೆ ಉತ್ತರ ಪ್ರದೇಶ ತಲುಪುವುದರಿಂದ ಸತ್ಯೇಂದ್ರ ದಾಸ್ ಔಪಚಾರಿಕ ಪತ್ರ ಬರೆದಿದ್ದಾರೆ ಎನ್ನಬಹುದು.

ಆದರೆ ಅಯೋಧ್ಯೆಯ ಹನುಮಾನ್ ಆಲಯದ ಅರ್ಚಕ ರಾಜು ದಾಸ್ ಈ ಕಾಗದ ಖಂಡಿಸಿ, ಅದು ಅವರ ವೈಯಕ್ತಿಕ ಅಭಿಪ್ರಾಯ. ಕಾಂಗ್ರೆಸ್ ಸದಾ ಹಿಂದೂ ವಿರೋಧಿ ಪಕ್ಷ ಎಂದು ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ.  2023ರ ಜನವರಿ 30ರಂದು ಅಂದರೆ ಗಾಂಧೀಜಿ ಪುಣ್ಯ ದಿನದಂದು ಭಾರತ್ ಜೋಡೋ ಯಾತ್ರೆ ಶ್ರೀನಗರದಲ್ಲಿ ಸಮಾರೋಪ ಕಾಣುವುದಾಗಿ ತಿಳಿದು ಬಂದಿದೆ.