ಜಸ್ಟಿಸ್ ಬಿ. ವಿ. ನಾಗರತ್ನ ಅವರು ನೋಟು ರದ್ದು ಸರಿಯಲ್ಲ ಎಂಬ ಗಟ್ಟಿ ಭಿನ್ನ ತೀರ್ಪು ನೀಡಿ ಸುಪ್ರೀಂ ಕೋರ್ಟ್‌ನಲ್ಲಿ ಮಹಿಳೆಯ ಶಕ್ತಿ ತೋರಿಸಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕಿನ ಕಾಯ್ದೆಯ 26ನೇ ವಿಧಿಯಂತೆ ನೋಟು ರದ್ದು ಕಾನೂನು ಬಾಹಿರ ಎಂದು ಕರ್ನಾಟಕ ಮೂಲದ ನ್ಯಾಯಮೂರ್ತಿ ಬಿ. ವಿ. ನಾಗರತ್ನ ಹೇಳಿದರು.

Image courtesy

ಅದೇ ಕಾನೂನು ಎಲ್ಲರಿಗೂ ಇದ್ದರೂ ಇತರ ನ್ಯಾಯಮೂರ್ತಿಗಳು ತಪ್ಪು ಎಂದು ಹೇಳಲಾಗದು ಎಂದು ತೀರ್ಪು ನೀಡಿದರು. ಸರಿ ಎಂದು ಹೇಳಿಲ್ಲ ಎನ್ನುವುದು ಮುಖ್ಯ. ಸಂಸತ್ತು ಕಾಯ್ದೆ ಪಾಸು ಮಾಡಿ ನೋಟು ರದ್ದು ಮಾಡಬೇಕೆ ಹೊರತು ಸರಕಾರಕ್ಕೆ ನೇರ ನೋಟು ರದ್ದು ಮಾಡುವ ಅಧಿಕಾರ ಇಲ್ಲ ಎಂದು ನ್ಯಾಯಮೂರ್ತಿ ನಾಗರತ್ನ ಸ್ಪಷ್ಟಪಡಿಸಿದ್ದಾರೆ.

ಇದು ಮೋದಿ ಸರಕಾರಕ್ಕೆ ಒಂದು ತಪರಾಕಿ ಎಂದು ಕಾಂಗ್ರೆಸ್ ಹೇಳಿದೆ. ನೋಟು ರದ್ದು ಮಾಡುವ ಮೊದಲು ಭಾರತೀಯ ರಿಸರ್ವ್  ಬ್ಯಾಂಕ್ ಜೊತೆಗೆ ಆರು‌ ತಿಂಗಳ ಕಾಲ ಚರ್ಚಿಸಿದ್ದಾಗಿ ಸರಕಾರ ಹೇಳಿದೆ. ಆಗ ಆ ಕಾನೂನು ವಿಧಿ ಇವರಿಗೆ ಯಾಕೆ ಕಾಣಿಸಲಿಲ್ಲ.  2016ರ ನವೆಂಬರ್ 8ರಂದು ಮೋದಿ ಸರಕಾರ ಕೆಲವು ನೋಟು ರದ್ದು ಮಾಡಿತ್ತು. ಇದನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ 58 ಅರ್ಜಿಗಳು ಸಲ್ಲಿಕೆಯಾಗಿದ್ದವು.