ಬಂಟ್ವಾಳ: ಭಾರತೀಯ ಕಥೊಲಿಕ್ ಯುವ ಸಂಚಾಲನ ಸಂತ ಜೋನ್ ಬಂಟ್ವಾಳ ವಲಯ ಇದರ ಅಶ್ರಯದಲ್ಲಿ ಗ್ರೇಸ್ ಪಾಲಿಕ್ಲಿನಿಕ್ ಲೊರೆಟ್ಟೊ, ಬಂಟ್ವಾಳ, ಲಿಯೋ ಕ್ಲಬ್ ಲೊರೆಟ್ಟೊ- ಅಗ್ರಾರ್, ಲಯನ್ಸ್ ಕ್ಲಬ್ ಲೊರೆಟ್ಟೊ- ಅಗ್ರಾರ್, ಕಥೋಲಿಕ್ ಸಭಾ, ಲೊರೆಟ್ಟೊ ಹಾಗೂ ಬಂಟ್ವಾಳ ವಲಯ ರೆಡ್ ಡ್ರಾಪ್ ಸಂಸ್ಥೆ , ಮಂಗಳೂರು, ಭಾರತೀಯ ಕಥೊಲಿಕ್ ಯುವ ಸಂಚಾಲನ, ಲೊರೆಟ್ಟೊ ಘಟಕ, ಫಾದರ್ ಮುಲ್ಲರ್ ಆಸ್ಪತ್ರೆ, ಕಂಕನಾಡಿ ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಲೊರೆಟ್ಚೊ ಗ್ರೇಸ್ ಕ್ಲಿನಿಕ್ ವಠಾರದಲ್ಲಿ ನಡೆಸಲಾಯಿತು.

ಲೊರೆಟ್ಟೊ ಚರ್ಚಿನ ಧರ್ಮಗುರುಗಳಾದ ವಂ|ಫಾ| ಫ್ರಾನ್ಸಿಸ್ ಕ್ರಾಸ್ತಾ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಅವರು ರಕ್ತದಾನ ಮಾಡುವುದರಿಂದ ಇತರರ ಜೀವನದಲ್ಲಿ ಬೆಳಕಾಗಬಹುದು. ರಕ್ತದಾನವು ಮಾನವೀಯತೆಯ ಪ್ರತಿಬಿಂಬವಾಗಿದೆ ಎಂದರು.



ಕಾರ್ಯಕ್ರಮದಲ್ಲಿ ಗ್ರೇಸ್ ಪಾಲಿಕ್ಲಿನಿಕ್ ಮಾಲೀಕರಾದ ಜೋಸ್ಸಿ ಲೋಬೊ, ಐಸಾಕ್ ವಾಸ್, ಆನ್ಸೆಲ್ ಮಾರ್ಟಿಸ್, ಜೋನ್ ಲಸ್ರಾದೊ, ರಾಯನ್ ರೊಡ್ರಿಗಸ್, ವಿನ್ ಸ್ಟನ್ ಸಿಕ್ವೇರಾ, ಎಲ್ವಿನ್ ಡಿಕುನ್ಹಾ, ಆಲ್ವಿನ್ ಪಿಂಟೊ, ಸ್ನೇಹಲ್ ರೊಸಾರಿಯೊ ಮೊದಲಾದವರು ಉಪಸ್ಥಿತರಿದ್ದರು. ಐಸಿವೈಎಮ್ ರೆಡ್ ಡ್ರಾಪ್ ಪ್ರತಿನಿಧಿ ರೋಶನ್ ಸಿಕ್ವೇರಾ ಬಾಂಬಿಲ್ ಸ್ವಾಗತಿಸಿ, ಅಧ್ಯಕ್ಷ ಆ್ಯರೋಲ್ ಸಿಕ್ವೇರಾ ಲೊರೆಟ್ಟೊ ವಂದಿಸಿದರು. ಕಾರ್ಯದರ್ಶಿ ಮೆಲ್ ರೋಯ್ ಡಿಸೋಜಾ ಅಲ್ಲಿಪಾದೆ ಕಾರ್ಯಕ್ರಮ ನಿರೂಪಿಸಿದರು.