ನವೆಂಬರ್ 28ರ ಬೆಳಿಗ್ಗೆ ಬೋಳೂರು ಗ್ಯಾಂಗ್‌ನ ಅಂಕಿತ್ ಮತ್ತು ಶ್ರವಣ್‌ರ ಮೇಲೆ ದಾಳಿ ನಡೆಸಿದ್ದ ಅಳಕೆ ಗ್ಯಾಂಗ್‌ನ ನಾಲ್ವರನ್ನು ಪೋಲೀಸರು ಬಂಧಿಸಿದ್ದಾರೆ. ಅಶೋಕ ನಗರದ ನವನೀತ್, ಹೊಯಿಗೆಬಯ್ಲಿನ ಹೇಮಂತ್, ಬೋಳೂರು ದೀಕ್ಷಿತ್ ಹಾಗೂ ಅವರಿಗೆ ಅಡಗಲು ಸ್ಥಳ ನೀಡಿದ ಸಂದೇಶ್ ಬಂಧಿತರು. ಹತ್ಯೆಯಾಗಿದ್ದ ಇಂದ್ರಜಿತ್ ಸ್ನೇಹಿತರಾದ ಇವರು ಹಿಂದೆಯೂ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದರು.
ದಾಳಿಗೆ ಬಳಸಿದ ಮೂರು ತಲವಾರು ಮತ್ತು ಮೂರು ಬೈಕ್‌ಗಳನ್ನು ಸಹ ಪೋಲೀಸರು ವಶಪಡಿಸಿಕೊಂಡಿದ್ದಾರೆ.