ವಿದ್ಯಾಗಿರಿ, ಮೂಡುಬಿದಿರೆ: ಸಿ.ಎ. ಫೌಂಡೇಶನ್ 2023ನೇ ಸಾಲಿನ ಫಲಿತಾಂಶದಲ್ಲಿ ಆಳ್ವಾಸ್ ಪದವಿ ಮತ್ತು ಪದವಿಪೂರ್ವ ಕಾಲೇಜಿನ ಒಟ್ಟು 196 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ದಾಖಲೆ ಫಲಿತಾಂಶ ಹೊರಹೊಮ್ಮಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು. 

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿ.ಎ. ಫೌಂಡೇಶನ್ ಪರೀಕ್ಷೆ ಫಲಿತಾಂಶವು 2023ರ ಫೆಬ್ರವರಿ  ಹಾಗೂ ಆಗಸ್ಟ್ ನ ಎರಡು ಹಂತಗಳಲ್ಲಿ ಪ್ರಕಟಗೊಂಡಿದೆ ಎಂದರು. 

ಫೆಬ್ರುವರಿ 2023ರ ಫಲಿತಾಂಶದಲ್ಲಿ ಆಳ್ವಾಸ್ ಕಾಲೇಜಿನ 128 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 97 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಆಳ್ವಾಸ್ ಶೇಕಡ 75.78 ಫಲಿತಾಂಶ ಗಳಿಸಿತ್ತು. ಆದರೆ ಈ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ ಶೇಕಡ 29.25 ಫಲಿತಾಂಶ ದಾಖಲಾಗಿತ್ತು. 

ಆಗಸ್ಟ್ 2023ರ ಫಲಿತಾಂಶದಲ್ಲಿ  ಆಳ್ವಾಸ್ ಕಾಲೇಜಿನ 178 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 99 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಆಳ್ವಾಸ್ ಶೇ55.62 ಫಲಿತಾಂಶ ಗಳಿಸಿದೆ. ಆದರೆ, ರಾಷ್ಟ್ರಮಟ್ಟದಲ್ಲಿ ಶೇಕಡ 24.98 ಫಲಿತಾಂಶ ದಾಖಲಾಗಿದೆ.  

ಆಗಸ್ಟ್ 2023ರಲ್ಲಿ ಪ್ರಕಟಗೊಂಡ ಫಲಿತಾಂಶದಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಾದ ಶ್ರೀಲಕ್ಷ್ಮೀ ಟಿ.(306), ಆದಿತ್ಯ ಶರ್ಮಾ(303), ಭಾವನಾ ಬಿ.(302), ವೈಷ್ಣವಿ ಬಿ.ವಿ.(297), ಅಮನ್‍ರಾಜ್(291), ಕಾರ್ತಿಕ್ ಇಂದ್ರ(290), ರಾನ್ಸನ್(284), ರಾಯಿಡನ್(284), ಶಿವಾನಿ(284), ಸುಮಂತ್ ಮೋಹನ್(284), ಕೆ.ದಿಶಾ ರಾವ್(283), ಪೃಥ್ವಿ ಕೃಷ್ಣಮೂರ್ತಿ ಭಟ್(282), ರಾಮನಾಥ ಎಸ್. ಪ್ರಭು(281), ಸೃಷ್ಟಿ ಉದಯ್(281), ಚಿನ್ಮಯ ಎಸ್. ಅಳ್ಳಿ (280)ವಿಶಿಷ್ಟ (ಡಿಸ್ಟಿಂಕ್ಷನ್) ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಒಟ್ಟು 400 ಅಂಕದಲ್ಲಿ ಪರೀಕ್ಷೆ ನಡೆದಿತ್ತು. 

ಕೃತಿ ಬಿ.ಪಿ, ನಿತಿನ್ ಕುಮಾರ್ ಎನ್., ಆಕಾಶ್ ಕಾಮತ್, ಖುಷಿ ಹರೀಶ್, ಸುಶಾಂತ್, ಸ್ಮಿತಾ ಎಂ.ಎಂ, ಶಿವಾನಿ ಕೋಟ್ಯಾನ್, ಸೌಖ್ಯ ಜಿ, ರಾಘವ್ ಜೆ.ಎಂ., ಆದರ್ಶ್ ಜೆ. ಆಚಾರ್ಯ, ಪ್ರಣವ್ ಬಿ.ಆರ್., ಆಕಾಶ್ ಸಿ. ಹೆಗ್ಡೆ, ಸುಶಾಂತ್ ಎಸ್, ಋತ್ವಿಕ್ ಜೆ.ಎಸ್, ಶ್ರೇಯಾ ಪಿ. ಪೂಜಾರಿ, ಚೇತನ್ ರೆಡ್ಡಿ, ಶ್ರೇಯಸ್ ಕುಮಾರ್, ಪ್ರಜ್ವಲ್, ಸುಹಾಸ್ ಎಸ್.ಎನ್, ಸುಕ್ರಿತ್ ಎನ್.ಎಸ್, ವರುಣ್, ಸುರಕ್ಷಿ ಶೆಟ್ಟಿ, ರಕ್ಷಿತಾ ಜೆ., ಆಯುಷ್ ಎ. ಕಾಮತ್, ನೀಲಮ್ಮಾ, ಕೃತಿಕಾ, ಶ್ರಾವಣ್ಯ, ನಿತ್ಯಶ್ರೀ, ತೇಜಸ್ವಿನಿ, ಶ್ರುತಿಕಾ ಎಸ್., ಸ್ವಾತಿ ಶ್ರೀರಾಮ್, ಶ್ರೀಕರ್ ಪಾಟೀಲ್, ಐಶ್ವರ್ಯ, ಖುಷಿ ಯು. ಸಾಲಿಯಾನ್, ಪ್ರಕೃತಿ, ಹರೀಶ್ ರವೀಂದ್ರ, ಮಂಜುನಾಥ್, ದೀಕ್ಷಾ, ಹೃಷಿಕಾ, ಸಾನಿಧ್ಯ ಕೋಟ್ಯಾನ್, ಅಜಯ್ ಆರ್, ವೈಷ್ಣವಿ ಎಸ್., ಕವನ, ತೇಜಸ್ ಎನ್.ಎಂ., ತರುಣ್ ಕೆ., ತನುಶ್ರೀ ಯು, ದರ್ಶನ್ ಪಿ, ಕವನ, ಸುಚಿತಾ ಬಿ.ಸಿ, ಧನ್ಯಾ ಎಸ್, ಲಿಖಿತ್ ಬಿ., ವೈಷ್ಣವಿ, ಸೌಮ್ಯ ಜಿ., ಕೃಷ್ಣ ಜಿ.ಕೆ, ಶ್ರೇಯಾ ಎ.ಎಚ್, ಆರ್.ಎ. ತುಷಾರ್, ಪ್ರಣೀತ್ ಮನ್ನೂರು, ಅಭಿಷೇಕ್ ಎಂ., ರಜತ್ ಆರ್. ಡಬ್ಲ್ಯೂ, ಶ್ರೇಯಾ ಎಸ್.ಎಚ್, ಕ್ರತಿಕಾ ಯು.ಎಸ್, ಚರಿತಾ ಜಿ., ಶಾಲಿನಿ ಎಂ, ಪವನ್ ಕುಮಾರ್, ಕೃತಿಕಾ ಬಿ., ಶ್ರೇಯಸ್ ನಾಗೇಶ್, ಜ್ಯೋತಿ ವಿ.ಬಿ, ಮೋನಿಷಾ ಕುಂದರ್, ಶಿಖಾ ಎಸ್., ಖುಷಿ ಆರ್. ಪೂಜಾರಿ, ಯಶ್ ಇನಾನಿ, ಆಷೆಲ್ ಡಿಸೋಜ, ಜಿ.ಪಿ. ಪ್ರಾಂಜಲಿ, ಕೇಶವ ಶರ್ಮಾ, ಅಭಿಷೇಕ್ ಆರ್. ದಾಸರ್,  ಆರ್ಯ ಎಂ., ತರುಣ್ ಕೆ, ಪುನೀತ್ ಎಸ್.  ವೈಷ್ಣವಿ ಎಸ್.ಎಚ್, ಹಿಂದುಶ್ರೀ, ವಿಜಯ್ ಕುಮಾರ್, ವಿಧಿಶಾ ಕಾಮತ್, ರಾಮ್‍ಕುಮಾರ್ ಡಿ.ಬಿ. ಉತ್ತೀರ್ಣರಾಗಿದ್ದಾರೆ. ತಮ್ಮ ಮೊದಲನೆಯ ಪ್ರಯತ್ನದಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.

ಇನ್ಸ್‍ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಆಯೋಜಿಸಿದ್ದ ಮೇ ಆವೃತ್ತಿಯ ಸಿ.ಎ. ಇಂಟರ್‍ಮೀಡಿಯೆಟ್ ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿಗಳಾದ ದೀಪಕ್ ಹೆಗ್ಡೆ ಹಾಗೂ ಪ್ರಜ್ವಲ್ ಎ. ಮೂಲ್ಯ ಅಖಿಲ ಭಾರತ ಮಟ್ಟದಲ್ಲಿ ಕ್ರಮವಾಗಿ 10 ಮತ್ತು 50ನೇ ರ್ಯಾಂಕ್ ಪಡೆದಿದ್ದು, ಆಳ್ವಾಸ್ ಕಾಲೇಜು ಗ್ರೂಪ್ -1ರಲ್ಲಿ ಶೇಕಡ 57.89, ಗ್ರೂಪ್ -2ರಲ್ಲಿ ಶೇಕಡ 100 ಹಾಗೂ ಎರಡೂ ಗ್ರೂಪ್‍ಗಳಲ್ಲಿ ಶೇಕಡ 40 ಫಲಿತಾಂಶ ಪಡೆದಿರುವುದನ್ನು ಉಲ್ಲೇಖಿಸಬಹುದಾಗಿದೆ. 

ಪತ್ರಿಕಾಗೋಷ್ಠಿಯಲ್ಲಿ ಪದವಿ ಕಾಲೇಜು ಪ್ರಾಂಶುಪಾಲ ಡಾ. ಕುರಿಯನ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮೊಹಮದ್ ಸದಾಕತ್, ಪದವಿ ಪೂರ್ವ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ ಎಂ. ಡಿ., ವೃತ್ತಿಪರ ವಾಣಿಜ್ಯ ವಿಭಾಗದ ಸಂಯೋಜಕ ಅಶೋಕ ಕೆ.ಜಿ., ಸಂಯೋಜಕರಾದ ಅನಂತಶಯನ ಮತ್ತು ಅಪರ್ಣಾ ಕೆ. ಇದ್ದರು.