ಮೂಡುಬಿದಿರೆ: ಸ್ಥಳೀಯ ಪತ್ರಿಕಾ ದಿನಾಚರಣೆ ಪ್ರಯುಕ್ತ ಮಾಧ್ಯಮ ಹಬ್ಬ 2024 ರನ್ನು ಜುಲೈ 1ರಂದು ಸಮಾಜ ಮಂದಿರದಲ್ಲಿ ಹಮ್ಮಿಕೊಂಡಿತ್ತು . ಕಾರ್ಯಕ್ರಮದ ಉದ್ಘಾಟನೆಯನ್ನು ಕೆ ಎಂ ಎಫ್ ನಾ ಅಧ್ಯಕ್ಷ ಕೆ ಪಿ ಸುಚರಿತ ಶೆಟ್ಟಿ ಅವರು ನೆರವೇರಿಸಿದರು.

ಅವರು ತಮ್ಮ ಭಾಷಣದಲ್ಲಿ ಉಳಿದೆಲ್ಲ ಅಂಗಗಳಿಗಿಂತ ಹೆಚ್ಚು ಪ್ರಮುಖ ಹಾಗೂ ಪರಿಣಾಮಕಾರಿಯಾದ ಪತ್ರಿಕಾ ಮಾಧ್ಯಮವು ಎಲ್ಲವನ್ನು ಎಲ್ಲರನ್ನು ಪ್ರಶ್ನಿಸುವ ಮೂಲಕ ಸ್ವಾಸ್ಥ್ಯ ಮತ್ತು ಆರೋಗ್ಯಪೂರ್ಣ ಸಮಾಜವನ್ನು ನಿರ್ಮಿಸಲು ಪ್ರಯತ್ನಿಸುತ್ತಿದೆ. ಅವಕಾಶ ರಹಿತರಿಗೆ ವ್ಯವಸ್ಥೆಗಳನ್ನು ಮಾಡಿಕೊಡಲು ಕೂಡ ಪ್ರಯತ್ನಿಸುತ್ತಿರುವುದು ಸಂತೋಷಕರ ಸಂಗತಿ ಎಂದು ತಿಳಿಸಿದರು.

ವಿಶ್ರಾಂತ  ಪತ್ರಕರ್ತ ಸದಾನಂದ ಹೆಗಡೆಕಟ್ಟೆ ಪ್ರಾಯೋಜಿಸಿದ ದತ್ತಿ ನಿಧಿ ಉಪನ್ಯಾಸ ಗ್ರಾಮೀಣ ಪತ್ರಕರ್ತರಿಗಿರುವ ಅವಕಾಶಗಳು ಮತ್ತು ಸವಾಲುಗಳು ವಿಷಯವಾಗಿ ಬಂಟ್ವಾಳ ತಾಲೂಕು ಕಾರ್ಯ ನಿರತಪತ್ರಕರ್ತರ ಸಂಘದ ಕಾರ್ಯದರ್ಶಿ ಮೌನೇಶ್ ವಿಶ್ವಕರ್ಮ ಅವರು ಮಾತನಾಡಿ, ಪತ್ರಿಕಾ ಓದುವವರ ಸಂಖ್ಯೆ ಕಡಿಮೆಯಾದರೂ ಗ್ರಾಮೀಣ ಪತ್ರಕರ್ತರು ಸುದ್ದಿಯನ್ನು ತಲುಪಿಸುವಲ್ಲಿ ನ್ಯಾಯೋಚಿತವಾಗಿ ಪ್ರಯತ್ನಿಸುತ್ತಿದ್ದಾರೆ ಆದರೆ ಅವರಿಗೆ ದೊರಕುವ ಗೌರವ, ಸಂಭಾವನೆ ಯಾವುದು ಸಮರ್ಪಕವಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಎಲ್ಲಕ್ಕಿಂತ ಹೆಚ್ಚು ಮನೋ ಮಾಲಿನ್ಯವೇ ಹೆಚ್ಚುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅವರ ಮಾತನಾಡಿ ಸಮಾಜಮುಖಿ ಕಾರ್ಯಗಳನ್ನು ಜಿಲ್ಲಾ ಸಂಘದಿಂದ ಹಮ್ಮಿಕೊಳ್ಳುತ್ತಿದ್ದೇವೆ ಎಂದು ವಿವರಗಳನ್ನು ತಿಳಿಸಿದರು. ಈ ವರ್ಷದ ಪ್ರೆಸ್ ಕ್ಲಬ್ ಗೌರವವನ್ನು ಹಿರಿಯ ಕವಿ ಆರ್ ರಾಮಚಂದ್ರ ಪೈ ಹಾಗೂ ಮಾನಸ ಡಿಜಿಟಲ್ ನ ರವಿ ಎಸ್ ಕೋಟ್ಯಾನ್ ಅವರಿಗೆ ನೀಡಲಾಯಿತು. ಎಸ್ ಎಸ್ ಎಲ್ ಸಿ ಪರೀಕ್ಷೆಯ ಸಾಧಕರಾದ ಸನ್ಮತ್ ಎಸ್ ಆಚಾರ್ಯ ಹಾಗೂ ಯಜ್ಞೇಶ್  ಅಶ್ವತ್ಥಪುರ ಅವರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು.

ಮೂಡುಬಿದಿರೆ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ ಬಿ ಸೀತಾರಾಮ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.

ನವೀನ್ ಸಾಲಿಯಾನ್ ಹಾಗೂ ರಾಘವೇಂದ್ರ  ಶೆಟ್ಟಿ ಅವರು ಸನ್ಮಾ ನ ಪತ್ರವನ್ನು ವಾಚಿಸಿದರು. ಹರೀಶ್ ಆದೂರು ಸ್ವಾಗತಿಸಿದರು.

ಗಣೇಶ್ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಪ್ರಸನ್ನ ಹೆಗಡೆ ವಂದಿಸಿದರು.

ಸಚಿತ್ರ ವರದಿ: ರಾಯಿ ರಾಜಕುಮಾರ್ ಮೂಡುಬಿದಿರೆ.