ಸುರತ್ಕಲ್‌ನಲ್ಲಿ ಚೈತ್ರಾ ಕುಂದಾಪುರ ಎಂಬವರು ಹೆಣ್ಣಿನ ಬಗೆಗೆ ಕೀಳಾಗಿ ಮಾತನಾಡಿರುವುದು ಹೆಣ್ಣಾದ ಆಕೆಗೆ ಶೋಭೆ ತರುವುದಿಲ್ಲ ಎಂದು ಮಾಜೀ ಶಾಸಕಿ ಶಕುಂತಲಾ ಶೆಟ್ಟಿಯವರು ದಕ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹೇಳಿದರು.
35 ವರುಷವಾದರೂ ಮದುವೆಯಾಗಿಲ್ಲ ಎಂದು ಒಟ್ಟು ಬಂಟ ಹೆಣ್ಣಿನ ಬಗೆಗೆ ಹೇಳಿದ್ದೀರಿ. ಹಿಂದೂ ಎನ್ನುವ ನಿಮಗೆ ಹಿಂದೂ ಸಂಸ್ಕೃತಿಯ ಅರಿವಿಲ್ಲ. ನಿಮ್ಮ ಪಕ್ಷದ ಸಂಸದೆ ಶೋಭಾ ಕರಂದ್ಲಾಜೆಯವರು 55 ವರುಷವಾದರೂ ಏಕೆ ಮದುವೆಯಾಗಿಲ್ಲ ಎಂದು ನಾವು ಕೇಳಬಹುದೇ ಎಂದು ಶೆಟ್ಟಿ ಕೇಳಿದರು.
ನಿಮ್ಮ ಪಕ್ಷದ ಅಧ್ಯಕ್ಷರು ಬಂಟರು, ಸುರತ್ಕಲ್ ಶಾಸಕರು ಬಂಟರು. ಅಂಥಲ್ಲಿ ನೀವು ಬಂಟರ ಹೆಣ್ಣನ್ನು ಅವಮಾನ ಮಾಡುವಂತೆ ಮಾತನಾಡಲು ಹಿಂದೆ ಹೇಳಿದವರು ಯಾರು? ನೀವು ಕೋಟಿ ಚೆನ್ನಯ ದೈವ ಸ್ವರೂಪಿ ಯಮಳರ ಕೈಯ ಸುರಿಯವನ್ನು ತಲವಾರಿಗೆ ಹೋಲಿಸಿದ್ದೀರಿ. ಚೈತ್ರಾ ವಿಚಿತ್ರಾರೆ ನಿಮ್ಮದು ಬಂಟ ಬಲ್ಲವರನ್ನು ಬಡಿದಾಡಿಸುವ ಹುನ್ನಾರವೇ ಎಂದು ಅವರು ಪ್ರಶ್ನಿಸಿದರು.
ಹೆಣ್ಣು ಮಕ್ಕಳ ಮೇಲೆ ಎಲ್ಲ ಕಡೆ ಬಿಜೆಪಿ ಆಡಳಿತದಲ್ಲಿ ದೌರ್ಜನ್ಯ ಹೆಚ್ಚಿದೆ. ಅದನ್ನು ತಡೆಯಲು ಚೈತ್ರಾ ಹೋರಾಡಲಿ. ನಾವೂ ಬರುತ್ತೇವೆ. ಇನ್ನು ಲವ್ ಜಿಹಾದ್ ನನಗೆ ಗೊತ್ತಿಲ್ಲ. ನನ್ನ ನೆರೆಕರೆಯ ಮುಸ್ಲಿಮರು ನನಗೆ ನಾನು ಬಿಜೆಪಿಯಲ್ಲಿ ಇರುವಾಗಲೂ ನೆರವಾಗಿದ್ದಾರೆ. ಹೀಗಿರುವಾಗ ಪ್ರೀತಿ ಎಂಬುದು ಅಕ್ಕ ತಮ್ಮ, ತಾಯಿ ಮಗ ಮೊದಲಾದ ಸಂಬಂಧಗಳಲ್ಲಿ ಕೂಡಾ ಇರುತ್ತದೆ. ಲವ್ ಹೃದಯಗಳದ್ದು, ಜಿಹಾದ್ ನದಲ್ಲ ಎಂದು ಶಕುಂತಲಾ ಶೆಟ್ಟಿ ಹೇಳಿದರು.
ಆರಂಭದಲ್ಲಿ ಶಾಲೆಟ್ ಪಿಂಟೋ ಎಲ್ಲರನ್ನೂ ಸ್ವಾಗತಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಮತಾ ಗಟ್ಟಿ, ಅಪ್ಪಿ, ಗೀತಾ ಅತ್ತಾವರ, ತನ್ವೀರ್ ಶಾ, ಮಲ್ಲಿಕಾ, ಚಂದ್ರಕಲಾ ಜೋಗಿ, ಸುರೇಖಾ ಮೊದಲಾದವರು ಉಪಸ್ಥಿತರಿದ್ದರು.