ಮಂಗಳೂರು, ಏ 25: ಜೆಪ್ಪಿನ ಮೊಗರು ವಾರ್ಡಿನಲ್ಲಿ ಕಾಂಗ್ರೆಸ್ ಪಕ್ಷದ ಬಿರುಸಿನ ಚುನಾವಣಾ ಪ್ರಚಾರ ತಾ 25.4.2023ರಂದು ನಡೆಯಿತು. ಪಕ್ಷದ ಅಭ್ಯರ್ಥಿ ಜೆ. ಆರ್. ಲೋಬೊರವರು ಮನೆ ಮನೆಗೆ ಭೇಟಿ ನೀಡಿ ಮತದಾರರನ್ನು ಸಂಪರ್ಕಿಸಿ ಕಾಂಗ್ರೇಸಿಗೆ ಮತ ನೀಡಬೇಕೆಂದು ವಿನಂತಿಸಿದರು. ಅವರು ಜೆಪ್ಪಿನ ಮೊಗರುವಿನ ಶ್ರೀ ದುರ್ಗಾಪರಮೇಶರಿ ಸನ್ನಿದಿ ದೇವಸ್ಥಾನ,ಕರ್ಮಿಸ್ಥಾನ ವೈದ್ಯನಾಥ ದೈವಸ್ಥಾನ, ಕೊರ್ಧಭ್ದು ದೈವಸ್ಥಾನ, ಜಪ್ಪು ಗುಡ್ಡೆಗುತ್ತು ನಾಗ ಸನ್ನಿದಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಲೋಬೊ ರವರು, ಸುದ್ಧಿಗಾರರೊಂದಿಗೆ ಮಾತನಾಡುತ್ತಾ, ಹಹಿಂದೆ ಶಾಸಕನಾಗಿದ್ದಾಗ ಜೆಪ್ಪಿನ ಮೊಗರು ಸಹಿತ ಬಜಾಲ್, ಅಳಪೆ, ಮೊದಲಾದ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನ ಒತ್ತನ್ನು ಕೊಟ್ಟು ಅಭಿವೃದ್ಧಿಗೆ ಬಹಳಷ್ಟು ಶ್ರಮಿಸಿದ್ದೇನೆ. ರಸ್ತೆ ಅಗಲೀಕರಣ, ಕಾಂಕ್ರೀಟ್ ಕರಣ, ಕೆರೆಗಳ ಅಭಿವೃದ್ಧಿ ಕಾರ್ಯ ಈ ಭಾಗದಲ್ಲಿ ಬಹಳಷ್ಟು ನಡೆದಿದೆ. ಮುಂದೆಯೂ ಅಧಿಕಾರ ನೀಡಿದಲ್ಲಿ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿರುತ್ತೇನೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಎಂಎಲ್ ಸಿ, ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜಾ,ಬ್ಲಾಕ್ ಅಧ್ಯಕ್ಷ ಸಲಿಂ, ಕಾರ್ಪೊರೇಟರ್ ಪ್ರವೀಣ್ ಆಳ್ವ, ಮಾಜಿ ಕಾರ್ಪೊರೇಟರ್ ನಾಗೇಂದ್ರ ಕುಮಾರ್, ವಾರ್ಡ್ ಅಧ್ಯಕ್ಷ ಸುಧಾಕರ್, ಕರುಣಾಕರ ಶೆಟ್ಟಿ ತರ್ದೋಲ್ಯ, ಸುನಿಲ್ ಕುಮಾರ್ ಪೂಜಾರಿ, ಓಸ್ವಲ್ಡ್ ಫುರ್ತಾದೋ, ಸುಧೀರ್ ಕಡೇಕರ್, ಹಾರ್ಬಟ್ ಡಿಸೋಜಾ, ದುರ್ಗಾ ಪ್ರಸಾದ, ನವೀನ್ ಸ್ಟಿವನ್, ಹೈದರ್ ಆಲಿ, ಶೈಲೇಶ್ ಭಂಡಾರಿ, ಹರೀಶ್ ಶೆಟ್ಟಿ, ಶಾಂತಿ, ಕವಿತ ಶೆಟ್ಟಿ, ದಿನೇಶ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.