ಕೇರಳ: ಶಾಲೆಗಳಿಗೆ ರಜೆ ಇರುವುದರಿಂದ ಮನೆಯಲ್ಲಿ ಮೊಬಾಯಿಲ್ ಬಳಸಿ ಕಾಲ ಕಳೆಯುತ್ತಿದ್ದ ಬಾಲಕಿಯೊಬ್ಬಳು ಮೊಬಾಯಿಲ್ ಸ್ಫೋಟಗೊಂಡು  ಸಾವಿಗೀಡಾದ ದುರ್ಘಟನೆ ಕೇರಳದ ತ್ರಿಶೂರ್‌ನಿಂದ ವರದಿಯಾಗಿದೆ.

3ನೇ ತರಗತಿ ಓದುತ್ತಿದ್ದ, 8 ವರುಷದ ಆದಿತ್ಯಶ್ರೀ ಸಾವಿಗೀಡಾದ ಬಾಲಕಿ. ಸೋಮವಾರ ಘಟನೆ ನಡೆದಿದ್ದು, ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.