ದ.ಕ. ಜಿಲ್ಲಾ ಹಳೆಯಂಗಡಿ ಸರಕಾರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ , ಗ್ರಾಹಕರಿಗೆ ಸರ್ಕಾರದಿಂದ ದೊರಕುವ ಸೌಲಭ್ಯಗಳು, ಗ್ರಾಹಕ ಹಿತ ರಕ್ಷಣಾ ಕಾಯ್ದೆಯ ಮಾಹಿತಿ ನೀಡಲಾಯಿತು.

ಬೆಂಗಳೂರು ಕ್ರಿಯೇಟ್ ಗ್ರಾಹಕ ಸಂಸ್ಥೆಯ ಸದಸ್ಯ, ದ.ಕ. ಜಿಲ್ಲಾ ಗ್ರಾಹಕ ಸಂಘಟನೆ ಒಕ್ಕೂಟದ ಜೊತೆ ಕಾರ್ಯದರ್ಶಿ ,ರಾಜ್ಯ ಸಂಪನ್ಮೂಲ ವ್ಯಕ್ತಿ ರಾಯಿ ರಾಜಕುಮಾರ ಮೂಡುಬಿದಿರೆ ಯವರು ಮಾಹಿತಿಯನ್ನು ನೀಡಿದರು. ನಮ್ಮ ದೇಶದಲ್ಲಿ 1986 ರಲ್ಲಿ ಕಾಯ್ದೆ ಜಾರಿಗೆ ಬಂದರೂ ಹೆಚ್ಚು ಜನರಿಗೆ ಅದರ ಉದ್ದೇಶ, ಉಪಯೋಗ ತಿಳಿಯದು. ಪಾಠ ಪುಸ್ತಕದಲ್ಲಿ ವಿವರವಾಗಿ ತಿಳಿಸಿದರು ಅದಕ್ಕೆ ಹೆಚ್ಚಿನ ಆದ್ಯತೆ ನೀಡಿಲ್ಲ. ವಿದ್ಯಾರ್ಥಿಗಳು ಗ್ರಾಹಕ ಹಕ್ಕು, ಕರ್ತವ್ಯ, ಮಾಹಿತಿ ಹಕ್ಕು ಕಾಯ್ದೆಯ ಮಾಹಿತಿಯನ್ನು ಹೊಂದಲು ಕೇಳಿಕೊಂಡರು. ಸೇವೆ ಹಾಗೂ ವಸ್ತುಗಳ ಗುಣಮಟ್ಟ ಕೊರತೆ ನೀಗಿಸಲು, ಪರಿಹಾರ ಪಡೆಯಲು ಇರುವ ವಿಧಾನ, ಜಿಲ್ಲಾ, ರಾಜ್ಯ, ಕೇಂದ್ರ ಪರಿಹಾರ ವೇದಿಕೆಯ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು. ಮುಖ್ಯ ಶಿಕ್ಷಕ ಮೈಕಲ್ ಡಿ ಸೋಜ ಸ್ವಾಗತಿಸಿದರು. ಶಿಕ್ಷಕಿ ಸುಹಾಸಿನಿ ವಂದಿಸಿದರು.