ದಿನಾಂಕ : 18-04-2021ನೇ ಆದಿತ್ಯವಾರ ಬೆಳಿಗ್ಗೆ 9.00 ಗಂಟೆಯಿಂದ “ಕಾರ್ಕಳ ಬಸ್ ನಿಲ್ದಾಣದಲ್ಲಿ” ರಕ್ತನಿಧಿ ಕೇಂದ್ರ, ಅಜ್ಜರಕಾಡು, ಉಡುಪಿ, ಇವರ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ(ರಿ) ತಾಲೂಕು ಶಾಖೆ, ಕಾರ್ಕಳ, ರೋಟರಿ ಕ್ಲಬ್, ಕಾರ್ಕಳ, ಬಸ್ ಏಜೆಂಟರ ಬಳಗ, ಕಾರ್ಕಳ, ಗ್ರೇಡ್-1, ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಕಾರ್ಕಳ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ) ತಾಲೂಕು ಘಟಕ, ಕಾರ್ಕಳ, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಕಾರ್ಕಳ ತಾಲೂಕು, ಇವರ ಸಂಯುಕ್ತ ಆಶ್ರಯದಲ್ಲಿ ನಿರಂತರ 13ನೇ ಬಾರಿಯ “ಬೃಹತ್ ರಕ್ತದಾನ ಶಿಬಿರ”ವನ್ನು ಏರ್ಪಡಿಸಲಾಯಿತು. ವೇದಿಕೆಯಲ್ಲಿ ರೋಟರಿ ಕ್ಲಬ್, ಕಾರ್ಕಳ ಇದರ ಅಧ್ಯಕ್ಷರಾದ ರೋ. ರೇಖಾ ಉಪಾಧ್ಯಾಯ, ಕಾರ್ಯದರ್ಶಿ ರೋ. ಶಶಿಕಲಾ ಹೆಗ್ಡೆ, ಬಸ್ ಏಜಂಟರ ಬಳಗದ ಆದ್ಯಕ್ಷರಾದ ಬಾಬು ಮೂಲ್ಯ, ರಕ್ತನಿಧಿ ಕೇಂದ್ರ, ಅಜ್ಜರಕಾಡು, ಉಡುಪಿ, ಇದರ ವೈದ್ಯಾಧಿಕಾರಿ ಡಾ/ ವೀಣಾ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ(ರಿ) ತಾಲೂಕು ಶಾಖೆ, ಕಾರ್ಕಳ, ಇದರ ಅಧ್ಯಕ್ಷರಾದ ಜೋಕಿಮ್ ಮೈಕಲ್ ಹೆಚ್. ಪಿಂಟೊ, ಗ್ರೇಡ್-1, ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಕಾರ್ಕಳ, ಇದರ ಅಧ್ಯಕ್ಷರಾದ ರಾಮಕೃಷ್ಣ ಹೆಗ್ಡೆ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ) ತಾಲೂಕು ಘಟಕ, ಕಾರ್ಕಳ ಇದರ ಅಧ್ಯಕ್ಷರಾದ ರಮಾನಂದ ಶೆಟ್ಟಿ, ಹೆಬ್ರಿ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಹರೀಶ್ ಎಸ್. ಪೂಜಾರಿ ಉಪಸ್ಥಿತರಿದ್ದರು. ರೋಟರಿ ಕ್ಲಬ್, ಇದರ ಕಾರ್ಯದರ್ಶಿಯಾದ ರೋ. ಶಶಿಕಲಾ ಹೆಗ್ಡೆ ಸಂದರ್ಭೋಚಿತವಾಗಿ ಮಾತನಾಡಿದರು. ರಕ್ತದಾನ ಶಿಬಿರಗಳಲ್ಲಿ ಭಾಗವಹಿಸಿ ರಕ್ತದಾನ ನೀಡುತ್ತಿದ್ದು, ಇತ್ತೀಚೆಗೆ ಕೋವಿಡ್-19ರಿಂದ ಅಕಾಲಿಕ ದೈವಾದೀನರಾದ ಗ್ರೆಟ್ಟಾ ಡಿ’ಸೋಜ ಇವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸತತ 63 ಬಾರಿ ರಕ್ತದಾನ ಮಾಡಿದ ದೇವದಾಸ್ ಪಾಟ್ಕರ್, ಶಿಕ್ಷಕರು ಇವರನ್ನು ಫಲ ಪುಷ್ಪ ನೀಡಿ ಸನ್ಮಾಲಿಸಲಾಯಿತು. ರಾಜಾರಾಮ್ ಶೇರ್ವೆಗಾರ್ ಇವರು ಕಾರ್ಯಕ್ರಮ ನಿರ್ವಹಿಸಿ, ಸ್ವಾಗತಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಇಕ್ಬಾಲ್ ಅಹಮ್ಮದ್ ಧನ್ಯವಾದ ನೀಡಿದರು. ಕಾರ್ಯಕ್ರಮದ ಯಶಸ್ಸಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ) ಉಡುಪಿ ಇದರ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಸಂಜೀವ ದೇವಾಡಿಗ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ತಾಲೂಕು ಶಾಖೆÉ, ಕಾರ್ಕಳ ಇದರ ಕಾರ್ಯದರ್ಶಿ ಉಮೇಶ್ ಕೆ.ಎಸ್ ಸಹಕರಿಸಿದರು.