ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಟ್ವೀಟ್ ಮಾಡಿ ಸುಪ್ರೀಂ ಕೋರ್ಟಿಗೆ ಇಬ್ಬರು ನ್ಯಾಯಾಧೀಶರ ನೇಮಕ ಆಗಿರುವುದನ್ನು ಪ್ರಕಟಿಸಿದರು. ಈ ಮೂಲಕ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳ ಸಂಖ್ಯೆಯು 34ಕ್ಕೆ ಏರಿತು.

ಗುಜರಾತ್ ಉಚ್ಚ ನ್ಯಾಯಾಲಯದಲ್ಲಿ ನ್ಯಾಯಾಧೀಶರುಗಳಾಗಿದ್ದ ಕರ್ನಾಟಕ ಮೂಲದ ಜಸ್ಟಿಸ್ ಅರವಿಂದ ಕುಮಾರ್ ಮತ್ತು ಗುಜರಾತಿನವರೇ ಆದ ರಾಜೇಶ್ ಬಿಂದಾಲ್ ಸುಪ್ರೀಂ ಕೋರ್ಟಿಗೆ ಪದೋನ್ನತಿ ಪಡೆದ ನ್ಯಾಯಾಧೀಶರು.

ಇದೇ ಸಂದರ್ಭದಲ್ಲಿ ಸಿಜೆಐ ಚಂದ್ರಚೂಡ್ ನೇತೃತ್ವದಲ್ಲಿ ಕೊಲಿಜಿಯಂ ಕೆಲವು ಹೈಕೋರ್ಟ್‌ಗಳಿಗೆ ನ್ಯಾಯಾಧೀಶರ ಹೆಸರುಗಳನ್ನು ಶಿಫಾರಸು ಮಾಡಿದೆ.

ಕೊಲ್ಕತ್ತಾ ಹೈಕೋರ್ಟಿಗೆ ಟಿ. ಎಸ್. ಶಿವಗಂಗಂ, ಅಲಹಾಬಾದ್ ಹೈಕೋರ್ಟಿಗೆ ಪ್ರೀತೀಂಕರ್ ದಿವಾಕರ್, ಛತ್ತೀಸಗಡ ಹೈಕೋರ್ಟಿಗೆ ರಮೇಶ್ ಸಿನ್ಹಾ, ಗುಜರಾತ್ ಹೈಕೋರ್ಟಿಗೆ ಸೋನಿಯಾ ಜಿ. ಸೋಲಂಕಿ, ಮಣಿಪುರ ಹೈಕೋರ್ಟಿಗೆ ಧೀರಜ್ ಸಿಂಗ್ ಠಾಕೂರ್ ಶಿಫಾರಸುಗೊಂಡವರಾಗಿದ್ದಾರೆ.