ಯಾಹೂ ಇನ್ಕ್.ಕಾಮ್  ಕಂಪೆನಿಯು ಅಪೋಲೋ ಗ್ಲೋಬಲ್ ಮ್ಯಾನೇಜ್ಮೆಂಟ್ ಇನ್ಕ್ ಮಾಲಿಕತ್ವದ್ದಾಗಿದ್ದು ಈ ವಾರ 1,000 ಸಿಬ್ಬಂದಿ ಕಡಿತ ಎಂದರೆ 12% ನೌಕರರನ್ನು ತೆಗೆಯುವುದಾಗಿ ಹೇಳಿದೆ.

ಕಳೆದೆರಡು ವರುಷಗಳಲ್ಲಿ ಕೆಲವು ಕೊಕ್ಕೆಗಳು ಬಿದ್ದಿವೆ. ಕಂಪೆನಿ ಲಾಭದಲ್ಲಿದ್ದರೂ ಜಾಗತಿಕ ಆರ್ಥಿಕ ಮುಗ್ಗಟ್ಟಿನಲ್ಲಿ ದಿಗಿಲುಗೊಳಿಸುವ ಗ್ರಾಹಕರು ಹೆಚ್ಚಿದ್ದಾರೆ. ಅವನ್ನೆಲ್ಲ ಸುಧಾರಿಸಲು ಈ ಸಿಬ್ಬಂದಿ ಕಡಿತ ಎಂದು ಯಾಹೂ ಮುಖ್ಯ ಕಾರ್ಯಕಾರಿ ಅಧಿಕಾರಿ ಜಿಮ್ ಲಾಂಜೋನ್ ಹೇಳಿದರು.

ಯಾಹೂ ಫೈನಾನ್ಸ್, ಯಾಹೂ ನ್ಯೂಸ್, ಯಾಹೂ ಸ್ಪೋರ್ಟ್ಸ್ ವಿಭಾಗದಲ್ಲಿ ಹೆಚ್ಚು ದುಡಿಯಲು ಯಾಹೂ ಜಾಹೀರಾತು ವಿಭಾಗ ತೆರೆಯುತ್ತಿದೆ. ಅದಕ್ಕೆ ಕೆಲವು ನೇಮಕಾತಿ ಬೇಕು. ಕೆಲಸ ಕಳೆದುಕೊಳ್ಳುವವರಲ್ಲಿ ಅದಕ್ಕೆ ಅರ್ಹರಿದ್ದರೆ ಪರಿಗಣಿಸಲಾಗುತ್ತದೆ ಎಂದೂ ಲಾಂಜೋನ್ ಹೇಳಿದರು.