ಮಂಗಳೂರು: ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕೇಂದ್ರ ಕಚೇರಿಯ 1ನೇ ಮಹಡಿಯಲ್ಲಿ ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ವಾರ್ಷಿಕ ಸಾಮಾನ್ಯ ಸಭೆ ಜರುಗಿತು ಸಭೆಯಲ್ಲಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಡಾ. ಎಂ. ಎನ್ ರಾಜೆಂದ್ರಕುಮಾರ್ ಉಪಸ್ಥಿತರಾಗಿ ಯೂನಯನ್ನಿನ ಕಾರ್ಯಚಟುವಟಿಯನ್ನು ಶ್ಲಾಗಿಸಿ ಮುಂದೆ ಇನ್ನೂ ಹೆಚ್ಚಿನ ರೀತಿಯಲ್ಲಿ ಯೂನಿಯನ್ ಮೂಲಕ ಎಲ್ಲಾ ಸಹಕಾರಿ ಸಂಘಗಳಿಗೆ ಗುಣಮಟ್ಟದ ತರಬೇತಿ ಶಿಕ್ಷಣವನ್ನು ಒದಗಿಸಿ ಸಂಘಗಳ ಆಡಳಿತ ವ್ಯವಸ್ಥೆ ಸುಧಾರಿಸಲು ಸಲಹೆ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಸಹಕಾರಿ ಯೂನಿಯನ್‍ನ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು ರವರು ಯೂನಿಯನ್ನಿನ ವಾರ್ಷಿಕ ವರದಿಯನ್ನು ಮಂಡಿಸಿ ಮಾತನಾಡಿ ಯೂನಿಯನ್ ಮುಖಾಂತರ ಈ ವರ್ಷ 20205 ಅಂತರಾಷ್ಟ್ರೀಯ ಸಹಕಾರ ವರ್ಷಾಚರಣೆ ಆಗಿರುವುದರಿಂದ ಉತ್ತಮ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಇದಕ್ಕೆ ಎಲ್ಲಾ ಸಹಕಾರಿ ಸಂಘಗಳ ಪ್ರತಿನಿಧಿಗಳು ಭಾಗವಹಿಸಿ ಪ್ರಯೋಜನೆ ಪಡೆಯಲು ತಿಳಿಸಿದರು. ಹಾಗೂ ಈ ವರ್ಷ ಯೂನಿಯನ್ನಿನ ಬೈಲಾ ತಿದುಪಡಿ ಮಾಡಲು ಒಪ್ಪಿದ್ದರಿಂದ ಮುಂದಿನ ಸಾಮಾನ್ಯ ಸಭೆಯಲ್ಲಿ ಸದಸ್ಯ ಸಂಘಗಳಿಗೆ ಡಿವಿಡೆಂಡ್ ಕೋಡಲಾಗುವುದು ಎಂದು ತಿಳಿಸಿದರು. 

ವೇದಿಕೆಯಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷರು ಮತ್ತು ಯೂನಿಯನ್ನಿನ ನಿರ್ದೇಶಕರಾದ ವಿನಯಕುಮಾರ್ ಸೂರಿಂಜೆ, ಯೂನಿಯನ್ನಿನ ಉಪಾಧ್ಯಕ್ಷರಾದ ನಿಲಯ ಅಗರಿ ಹಾಗೂ ಯೂನಿಯನ್ನಿನ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು.

ಸಹಕಾರಿ ಯೂನಿಯನ್‍ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್.ವ್ಹಿ. ಹಿರೇಮಠ ಸ್ವಾಗತಿಸಿ ವಂದಿಸಿದರು.