ದ.ಕ.ಜಿಲ್ಲಾ ಪದ್ಮಶಾಲಿ ಮಹಾಸಭಾ (ರಿ.) ಮಂಗಳೂರು ಮತ್ತು ದ.ಕ.ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘ (ರಿ.) ಇದರ 2020-21ನೇ ಸಾಲಿನ ಮಹಾಸಭೆಯು ದಿನಾಂಕ 28.11.2021ನೇ ರವಿವಾರ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಪುರಾತನ ಮಾರಿಯಮ್ಮ ದೇವಸ್ಥಾನ ಸುರತ್ಕಲ್ ಇಲ್ಲಿಯ ತ್ರೈರೂಪಿಣಿ ರಂಗಮಂಟಪದಲ್ಲಿ ಜರಗಿತು.

ಪದ್ಮಶಾಲಿ ಮಹಾಸಭಾದ ಅಧ್ಯಕ್ಷರಾದ ಎಂ. ಜಯರಾಮ್ ಮತ್ತು ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಓಂಪ್ರಕಾಶ್ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು.

2020-21ರ ಸಾಲಿನ “ಪದ್ಮಶಾಲಿ ಸಾಮಾಜಿಕ ಪ್ರಶಸ್ತಿ”ಯನ್ನು ಶ್ರೀ ಬಿ. ವಾಸುದೇವ ಶೆಟ್ಟಿಗಾರರಿಗೆ ಪ್ರಧಾನ ಮಾಡಲಾಯಿತು.

ಲಲಿತಾ ಸತೀಶ ಶೆಟ್ಟಿಗಾರ ಉಪಾಧ್ಯಕ್ಷೆ ಸ್ವಾಗತಿಸಿದರು. ಡಾ| ಶಿವಪ್ರಸಾದ ಶೆಟ್ಟಿಗಾರ ಮತ್ತು  ನಾಗಾರಾಜ ಶೆಟ್ಟಿಗಾರ ವರದಿ ವಾಚಿಸಿದರು. ಭಾಸ್ಕರ ಆರ್. ಶೆಟ್ಟಿಗಾರ್ ಮತ್ತು ರಾಘವ ಶೆಟ್ಟಿಗಾರ ಇವರುಗಳು ಆಯವ್ಯಯ ಮಂಡಿಸಿದರು. ಪದ್ಮಶಾಲಿ ವಿದ್ಯಾವರ್ಧಕ ಸಂಘದ ವತಿಯಿಂದ ಸುಮಾರು 150 ಮಿಕ್ಕಿದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಸಮಾಜದ ನೇಕಾರರಿಗೆ, ಆಯ್ದ ಪ್ರತಿಭಾಶಾಲಿ ಸಾಧಕರನ್ನು ಗುರುತಿಸಿ ಅಭಿವಂದಿಸಲಾಯಿತು.

ಸ್ವಾತಿ ಕೆ. ವಕ್ವಾಡಿ ಇವರು ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ದೀಪಕ್ ಕಿನ್ನಿಮುಲ್ಕಿ ವಂದಿಸಿದ್ದರು.