ಮಾತೃತ್ವದ ಮೌನ ಭಾಷೆಗೆ ಮಾತು ಬೇಕಿಲ್ಲವೇನೊ ದೇವರ ಆರ್ಶಿವಾದ ಮಗಳು ಎನ್ನಲೇ ಅಥವಾ ಆರ್ಶಿವಾದ ರೂಪದಲ್ಲಿ ಸಿಕ್ಕ ದೇವರು ಎನ್ನಲೇ ಮಗಳೆಂಬ ಮಾಣಿಕ್ಯ ಬದುಕಿನ ಚೈತನ್ಯ ಮಗಳೆಂದರೆ ಮತ್ತೊಬ್ಬಳು ಅಮ್ಮ ಮತ್ತೊಬ್ಬಳು ಗೆಳತಿ ಮತ್ತೊಂದು ಕನಸು ನಗು ಪ್ರೀತಿ ಹೀಗೆ ಪ್ರತಿಯೊಬ್ಬರ ಮನೆಯ ಮುದ್ದು ಮಗಳು ಅವರವರ ಬದುಕಿನಲ್ಲಿ ಮಹತ್ವದ ಸ್ಥಾನವಿದೆ.

ಮನೆಯ ಮಗಳು ಮನೆಯ ಮಹಾಲಕ್ಷ್ಮಿ ಹೆತ್ತವರ ಬದುಕಿನ ಭರವಸೆ ಹೃದಯದ ಬಡಿತ ಗರ್ಭದಲ್ಲಿ ಬೆಳೆಯುತಿರುವ ಮಗುವಿನ ಕದಲುವಿಕೆಯಿಂದ ಮಡಿಲ ಸೇರುವ ತನಕ ಕಾತುರದಿ ಕಾಯುತಿರುವ ಕ್ಷಣಗಳನ್ನ ಹೇಗೆ ವರ್ಣಿಸಲಿ ಪದಗಳಿಲ್ಲ ಈ ಪುಟ್ಟ ಪಾದಗಳ ನನ್ನ ಪುಟ್ಟ ಪ್ರಪಂಚಕ್ಕೆ ಪಾದಾರ್ಪಣೆ ಮಾಡಿದ ಕ್ಷಣ ನನ್ನ ಬೆರಳುಗಳನ್ನು ತನ್ನ ಪುಟ್ಟ ಮೃದು ಮುಷ್ಠಿಯಿಂದ ಬಿಗಿಯಾಗಿ ಹಿಡಿದು ನನ್ನ ಸ್ಪರ್ಶ ಮಾತ್ರಕ್ಕೆ ತನ್ನ ಅಳುವ ನಿಲ್ಲಿಸುವ ವ್ಯಾತ್ಸಲ್ಯದ ಬಂಧನವಿದು ಬದುಕಿನ ಅಪರೂಪದ ಕ್ಷಣಗಳಿವು ತಾಯ್ತನದ ಬಾಂಧವ್ಯ ನೀಡಿದ ಮಗಳೆ ಸದಾ ನಾ ನಿನ್ನ ಕಾಯುವೆ ನಿನಗೆ ಬೆಂಬಲವಾಗಿರುವೆ ಸದಾ ನಿನ್ನ ಜೊತೆ ಇರುವೆ. 

✍ ಅಂಜಲಿ ಶ್ರೀನಿವಾಸ