ಉಡುಪಿ: ಶ್ರೀ ಜಗದ್ಗುರು ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನಮ್ ಶ್ರೀ ವಿಷ್ಣುತೀರ್ಥ ಪೀಠಮ್ ಶ್ರೀ ಶ್ರೀ ಡಾ| ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರಿಂದ ಸುಬ್ರಹ್ಮಣ್ಯ ಮಠದ ಉಡುಪಿ ಶಾಖೆ ‘ಅನಂತ ಶ್ರೀ’ ಲೋಕಾರ್ಪಣೆ ಇಂದಿಲ್ಲಿ ಶುಕ್ರವಾರ ಉಡುಪಿಯಲ್ಲಿ ನೆರವೇರಿತು.

ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನವಾದ ಶ್ರೀ ಸಂಪುಟ ನರಸಿಂಹಸ್ವಾಮೀ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದ ಮಠಾಧೀಶ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಇವರ ದಿವ್ಯೋಪಸ್ಥಿತಿಯಲ್ಲಿ ಉಡುಪಿ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮತ್ತು ಕಿರಿಯ ಮಠಾಧೀಶ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಉಭಯ ಮಠಾಧೀಶರು ದೀಪಪ್ರಜ್ವಲನೆಗೈದು ‘ಅನಂತಶ್ರೀ’ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಶೀರೂರು ಮಠಾಧೀಶ ಶ್ರೀ ವಾಮನ ತೀರ್ಥ ಸ್ವಾಮೀಜಿ ಹಾಗೂ ಚಿತ್ರಾಪುರ ಮಠದ ಮಠಾಧಿಪತಿ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಉಪಸ್ಥಿತರಿದ್ದು ಮಠಾಧೀಶರಿಗೆ ಪಾದ ಪೂಜೆ ನೆರವೇರಿಸಲಾಯಿತು.