ಹಳ್ಳಿಯ 97 ಶೇಕಡಾ ಪೋಷಕರು ಎಲ್ಲ ಶಾಲೆಗಳನ್ನು ತೆರೆಯುವುದರತ್ತ ಒಲವು ಹೊಂದಿದ್ದಾರೆ ಎಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ.
ತೆರೆಯದ ಶಾಲೆಗಳು ಹಿಂದುಳಿದ, ಅತಿ ಹಿಂದುಳಿದ ಹಳ್ಳಿ ಮಕ್ಕಳ ಶಿಕ್ಷಣವನ್ನು ಹಳ್ಳ ಹಿಡಿಸಿದೆ.
ಬಹುತೇಕ ಹಳ್ಳಿ ಜನರಲ್ಲಿ ಸ್ಮಾರ್ಟ್ ಫೋನ್ ಇಲ್ಲ. ಪಾಠ ನೋಡಲಿಲ್ಲ. ಇನ್ನು ಫೋನಿದ್ದ ಮಕ್ಕಳಿಗೂ ಆನ್‌ಲೈನ್ ಪಾಠ ಅರ್ಥ ಆಗಿಲ್ಲ. ಒಂದು ಶಬ್ದ ತಿಳಿವ ವೇಳೆಗೆ ಆರು ಶಬ್ದ ಮುಂದೆ ಹೋಗುತ್ತಿತ್ತಂತೆ. ಹಳ್ಳಿ ಶಾಲಾ ಮಕ್ಕಳ ಓದುವ ಸಾಮರ್ಥ್ಯ ಕುಗ್ಗಿದೆ.