ನೇಪಾಳದ ರಾಜಧಾನಿ ಕಾಟ್ಮಂಡುವಿನಲ್ಲಿ ನಾಲ್ಕು ಗಂಟೆಗಳ ಅವಧಿಯಲ್ಲಿ 105 ಮಿಮೀ ಮಳೆ ಸುರಿದು ಜನ ಜೀವನ ನೀರಲ್ಲಿ ಮುಳುಗಿದಂತಾಗಿದೆ.
ಮನೋಹರ ನದಿ ತುಂಬಿ ಹರಿಯುತ್ತಿದ್ದು ದಡ ಮೀರಿ ಹರಿದಿದೆ. ಬೇತಿನಿ ಗ್ರಾಮದಲ್ಲಿ ಸಿಡಿಲು ಹೊಡೆದು 14 ಮನೆಗಳಿಗೆ ಹಾನಿಯಾಗಿದೆ ಹಾಗೂ 8 ಜನರು ಗಾಯಗೊಂಡರು.
ನೇಪಾಳದ 100 ಕಡೆ ನೆರೆ ನೀರು ನುಗ್ಗಿದ್ದು, 380 ಮನೆಗಳು ನೆಲದ ಮೇಲಿಂದ ಜಲದ ಒಳಕ್ಕೆ ಜಾರಿವೆ. ರಕ್ಷಕ ಪಡೆಗಳು ನಾನಾ ಕಡೆ 150ರಷ್ಟು ಜನರನ್ನು ನೀರಿನಿಂದ ರಕ್ಷಿಸಿದವು. ಕಡಗಾರಿ, ತೇಕು, ಬಾಲ್ಕು ಪ್ರದೇಶಗಳು ಜಲಪ್ರಳಯದ ಭಯದಲ್ಲಿವೆ.