ಆಡಳಿತ ಪಕ್ಷ ಸರಿಯಾಗಿ ನಿರ್ವಹಿಸಲು ವಿರೋಧಪಕ್ಷ ಬಹುಮುಖ್ಯ ಪಾತ್ರವಹಿಸುತ್ತದೆ.ಸಣ್ಣ ಪುಟ್ಟ ಲೋಪದೋಷಗಳಾದಾಗ ಸಂಸತ್ತಿನ ಅಧಿವೇಶನದಲ್ಲಿ ಚರ್ಚೆಗೆ ಬರುತ್ತದೆ ಆಗ ಅದನ್ನು ಸರಿಪಡಿಸಿ ಶಾಲೆಯ ಅಭಿವೃದ್ದಿಗೆ ಸಹಕರಿಸಿ.ಕೊರೋನಾದಿಂದಾಗಿ ಶೈಕ್ಷಣಿಕ ಅಂತರ ನಿರ್ಮಾಣವಾಗಿದ್ದು ಇಂತಹ ಉತ್ತಮ ಅಭ್ಯಾಸಗಳು ಬಿಟ್ಟುಹೋಗಿವೆ.ಅವು ಬಿಟ್ಟರೆ ಮತ್ತೆ ಸಿಗಲಾರದು. ವಿದ್ಯಾರ್ಥಿಗೆ ಇಂತಹ ಅನುಭವಗಳು ಅತ್ಯಗತ್ಯ.ಒಬ್ಬ ಒಳ್ಳೆಯ ನಾಯಕ ದೇಶ ಮುನ್ನಡೆಸಬಲ್ಲ.ಹಾಗೆ ಶಾಲೆಗೂ ಸಹ ಉತ್ತಮ ವಿದ್ಯಾರ್ಥಿ ನಾಯಕ ಅತ್ಯಗತ್ಯ. ಆಯ್ಕೆ ಮಾಡುವಾಗ ಉತ್ತಮ ವ್ಯಕ್ತಿತ್ವದ ವ್ಯಕ್ತಿಯನ್ನು ಆಯ್ಕೆ ಮಾಡುವುದನ್ನು ವಿದ್ಯಾರ್ಥಿಯಾಗಿದ್ದೇ ಕಲಿತುಕೊಳ್ಳಬೇಕು.ಶಾಲಾ ಮತದಾನ ವಿದ್ಯಾರ್ಥಿಗಳಿಗೆ ಮಾದರಿ ಮತದಾನದ ವ್ಯವಸ್ಥೆಯನ್ನು ತಿಳಿಸಿಕೊಡುತ್ತದೆ.ನಾಯಕತ್ವ ಗುಣ ಇರುವವರು ಚುನಾವಣೆಗೆ ನಿಲ್ಲಬೇಕು.ಹೀಗೆ ಆಗಬೇಕಾದರೆ ವಿದ್ಯಾರ್ಥಿ ಜೀವನದಲ್ಲೇ ಅದರ ಆಗು ಹೋಗುಗಳನ್ನು ತಿಳಿಯಬೇಕು.ಮುಂದೆ ವಿದ್ಯಾರ್ಥಿಗಳಿಗೆ ಅವಕಾಶ ಸಿಕ್ಕಾಗ ಉತ್ತಮ ನಾಯಕನ್ನು ದೇಶಕ್ಕೆ ನೀಡಿ. ದೇಶದ ಸತ್ಪಜೆಗಳಾಗಿ ಎಂದು ಶ್ರೀ.ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆ ಪೆರಿಂಜೆ ಇಲ್ಲಿನ ಮುಖ್ಯಶಿಕ್ಷಕರಾದ ಶ್ರೀಯುತ.ಮುಕುಂದ ಚಂದ್ರ ಶಿಲಾ ಮಂತ್ರಿಮಂಡಲವನ್ನು ಉದ್ಘಾಟಿಸಿ ಮಾತನಾಡಿದರು .ಶಾಲೆಯ ಗೌರವ ಹಾಗೂ ಶಿಸ್ತನ್ನು ಕಾಪಾಡುವಲ್ಲಿ ನಾವು ಸಹಕರಿಸುತ್ತೇವೆ.ಶಾಲೆಯ ಎಲ್ಲಾ ಅಭಿವೃದ್ಧಿ ಕಾರ್ಯಗಳಲ್ಲಿ ಉಪಸ್ಥಿತರಿದ್ದು ಸಹಕರಿಸುತ್ತೇವೆ.ನಮ್ಮಿಂದ ಏನೇ ಸಹಾಯಬೇಕಿದ್ದರೂ ಅಂಜಿಕೆ ಇಲ್ಲದೆ ಕೇಳಿ ಹಾಗೂ ನಮ್ಮನ್ನು ಗೆಲ್ಲಿಸಿದ ತಮಗೆಲ್ಲರಿಗೂ ನಾವು ಅಭಾರಿಗಳಾಗಿದ್ದೇವೆ ಎಂದು ಶಾಲಾ ವಿದ್ಯಾರ್ಥಿನಾಯಕ ವಿನೀತ್ ಭರವಸೆ ನೀಡಿದರು.ಸಂವಿಧಾನ ನಮಗೆ ಅನೇಕ ಹಕ್ಕುಗಳನ್ನು ನೀಡಿದೆ.ಅದರಂತೆ ಮತದಾನ ನಮ್ಮ ಹಕ್ಕು.ಉತ್ತಮ ನಾಯಕನ್ನು ದೇಶಕ್ಕೆ ನೀಡಬೇಕಾದರೆ ಮೊದಲು ಶಾಲೆಯಲ್ಲಿ ಅದಕ್ಕೆ ಬೇಕಾದ ಸಿದ್ಧತೆ ನಡೆಸಬೇಕಾಗುತ್ತದೆ.ಹೀಗಾಗಿ ಶಾಲೆಯಲ್ಲಿ ಮಂತ್ರಿಮಂಡಲದ ರಚನೆ,ಮತದಾನ ಇತ್ಯಾದಿಗಳನ್ನು ನಡೆಸಲಾಗುತ್ತದೆ ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ.ವಿ.ಪ್ರಾಸ್ತಾವಿಕ ನುಡಿಗಳಲ್ಲಿ ತಿಳಿಸಿದರು.ಶಾಲಾ ಮಂತ್ರಿಮಂಡಲದ ಅನುಸ್ಥಾಪನೆಯ ಪ್ರಾರಂಭ ರಾಷ್ಟ್ರಗೀತೆಯೊಂದಿಗೆ ಪ್ರಾರಂಭವಾಯಿತು.ಶಾಲಾ ವಿದ್ಯಾರ್ಥಿ ಜಸ್ಟಿನ್ ಅವರು ಕೀಬೋರ್ಡ್ ನಲ್ಲಿ ರಾಷ್ವಗೀತೆಯನ್ನು ನುಡಿಸಿದರು.ಶಾಲಾ ವಿದ್ಯಾರ್ಥಿ ನಿರಂತ್ ನೆರೆದವರನ್ನು ಸ್ವಾಗತಿಸಿ,ವೈಷ್ಣವಿ ಭಟ್ ಧನ್ಯವಾದ ಇತ್ತರು.ಸಂಜನಾ ಕಾರ್ಯಕ್ರಮ ನಿರೂಪಿಸಿದರು.ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿ ಸಮೂಹ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.
