ಉಳ್ಳಾಲ: ಕಳೆದ 2 ವರ್ಷದಿಂದ ಕೊರೊನಾದಿಂದಾಗಿ ಮುಂದೂಡಲ್ಪಟ್ಟ ವೀರರಾಣಿ ಅಬ್ಬಕ್ಕ ಉತ್ಸವವನ್ನು 2021ರ ಡಿಸೆಂಬರ್ ತಿಂಗಳಿನಲ್ಲಿ ನಡೆಸುವುದಾಗಿ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ(ರಿ)ಯ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.
75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ ಅಬ್ಬಕ್ಕ ಪ್ರಶಸ್ತಿ / ಅಬ್ಬಕ್ಕ ಪುರಸ್ಕಾರ, ತುಳು ಕಾರ್ಯಕ್ರಮ, ಬ್ಯಾರಿ ಕಾರ್ಯಕ್ರಮ, ಕೊಂಕಣಿ ಕಾರ್ಯಕ್ರಮದೊಂದಿಗೆ ನೃತ್ಯ, ನಾಟಕ ಹಾಗೂ ಸಾಂಸ್ಕøತಿಕ ಮನರಂಜನೆಗಳೊಂದಿಗೆ ಅಬ್ಬಕ್ಕ ಪ್ರಶಸ್ತಿ ಹಾಗೂ ಅಬ್ಬಕ್ಕ ಪುರಸ್ಕಾರವನ್ನು ವಿತರಿಸಲಾಗುವುದು ಎಂದು ಮಾಜಿ ಶಾಸಕರಾದ ಹಾಗೂ ಉತ್ಸವ ಸಮಿತಿಯ ಸ್ವಾಗತಾಧ್ಯಕ್ಷರಾದ ಶ್ರೀ ಕೆ ಜಯರಾಮ ಶೆಟ್ಟಿಯವರು ತಿಳಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಶ್ರೀ ದಿನಕರ ಉಳ್ಳಾಲ್, ಗೌರವ ಉಪಾಧ್ಯಕ್ಷರಾದ ಶ್ರೀಸದಾನಂದ ಬಂಗೇರ, ಪ್ರಧಾನ ಕಾರ್ಯದರ್ಶಿ ಶ್ರೀಮತಿ ಧನಲಕ್ಷ್ಮಿ ಗಟ್ಟಿ, ಕೋಶಾಧಿಕಾರಿ ಆನಂದ ಕೆ.ಅಸೈಗೋಳಿ,ಉಪಾಧ್ಯಕ್ಷರಾದ ಯು.ಪಿ.ಆಲಿಯಬ್ಬ, ದೇವಕಿ ಉಳ್ಳಾಲ್, ಪದಾಧಿಕಾರಿಗಳಾದ ಅಬ್ದುಲ್ ಅಜೀಜ್ ಹಕ್, ಡಿ.ಎನ್.ರಾಘವ, ವಾಸುದೇವ ರಾವ್, ಕೆ.ಎಂ.ಕೆ ಮಂಜನಾಡಿ, ಸತೀಶ್ ಭಂಡಾರಿ, ಆಲ್ಪ್ರೆಡ್ ಡಿಸೋಜ, ಚಿದಾನಂದ, ಭವ್ಯಕುಮಾರ್, ರತ್ನಾವತಿ ಜೆ.ಬೈಕಾಡಿ,ಶಶಿಕಲಾ ಗಟ್ಟಿ, ಮಲ್ಲಿಕಾ ಭಂಡಾರಿ, ಅನುಪಮ ಜೆ, ವಾಣಿ ಲೋಕಯ್ಯ, ಸರೋಜಾ ಕುಮಾರಿ, ಲೀಲಾವತಿ ಕಲ್ಲೂರಾಯ, ಹೇಮಾ ಕಾಪಿಕಾಡ್, ಕ್ಲೇರಾ, ಶಶಿಕಾಂತಿ ಉಳ್ಳಾಲ್, ಮಾಧವಿ ಉಳ್ಳಾಲ್, ಸುಷ್ಮಾ ಜನಾರ್ಧನ್, ಸರೋಜಾ ರಾವ್, ರಾಜೀವಿ ಕೆಂಪು ಮಣ್ಣು, ಸೇವಂತಿ ಶ್ರೀಯಾನ್, ರೇಷ್ಮಾ ಇಬ್ರಾಹಿಂ, ಸ್ವಪ್ನಾ ಶೆಟ್ಟಿ, ಸುಮಂಗಳ, ಲತಾ ಶ್ರೀಧರ್, ವಾಣಿ ಗೌಡ, ಭಾನುಮತಿ ಮುಂತಾದವರು ಉಪಸ್ಥಿತರಿದ್ದರು.