ಮಂಗಳೂರು: ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ರವರು ತಾ 22.1.2023 ರಂದು ನಗರದ ಬಿಷಪ್ ಹೌಸ್ ಗೆ ಭೇಟಿ ನೀಡಿ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾಲ್ ಸಾಲ್ದಾನ ಅವರನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆದರು. 

ಈ ಸಂದರ್ಭದಲ್ಲಿ ಮಾಜಿ ಶಾಸಕ ಜೆ. ಆರ್. ಲೋಬೊ, ಮೊಯಿದಿನ್ ಬಾವಾ, ಪ್ರೊ. ರಾಧಾಕೃಷ್ಣ, ಜಿ. ಎ.. ಬಾವಾ, ಹುಸೈನ್, ಶಶಿಧರ್ ಹೆಗ್ಡೆ, ನವೀನ್ ಡಿಸೋಜಾ, ದೀಪಕ್ ಪೂಜಾರ್, ಟಿ. ಕೆ. ಸುಧೀರ್, ಅಭಿಲಾಶ್ ಮೊದಲಾದವರು ಉಪಸ್ಥಿತರಿದ್ದರು.