ಹುಣಸೂರು: ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಎಂ.ಎಸ್. ಡಬ್ಲ್ಯೂ ವಿಭಾಗ ಇತ್ತೀಚೆಗೆ  ಹುಣಸೂರಿನ ಡೀಡ್ ಸಂಸ್ಥೆಯಲ್ಲಿ 2022- 23 ನೇ ಸಾಲಿನ ಶೈಕ್ಷಣಕ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ಶೈಕ್ಷಣಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಡೀಡ್ ಸಂಸ್ಥೆಯ ನಿರ್ದೇಶಕರಾದ  ಶ್ರೀಕಾಂತ್  ಗಿಡಗಳಿಗೆ ನೀರು ಹಾಕುವ ಮೂಲಕ ಮತ್ತು ಸೋಲಾರ್ ದೀಪವನ್ನು ಬೆಳಗಿಸುವುದರ ಮೂಲಕ ನಡೆಸಿಕೊಟ್ಟರು. 

ನಂತರ ಮಾತನಾಡುತ್ತಾ ಅವರು ಬುಡಕಟ್ಟು ಜನಾಂಗದ ಆಚಾರ - ವಿಚಾರ, ಗಾಂಧೀಜಿಯವರು ಸಮಾಜ ಕಾರ್ಯದಲ್ಲಿ ತಮ್ಮನ್ನು ತಾವು ಹೇಗೆ ತೊಡಗಿಸಿಕೊಂಡರು, ಆದಿವಾಸಿಗಳು ತಮ್ಮ ಹಕ್ಕುಗಳನ್ನು ಯಾವ ರೀತಿಯಲ್ಲಿ ಪಡೆದುಕೊಳ್ಳಬೇಕು, ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ  ಮುಂತಾದ ವಿಷಯದ ಬಗ್ಗೆ ವಿಸ್ತಾರವಾದ ಮಾಹಿತಿಯನ್ನು ನೀಡಿದರು.  ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ  ಡೀಡ್ ಸಂಸ್ಥೆಯ ಸಿಬ್ಬಂದಿಯಾದ ಪ್ರಕಾಶ್  ಇವರು ಮಾತನಾಡಿ ಬುಡಕಟ್ಟು ಜನಾಂಗದವರಿಗೆ ಇರುವ ಸೌಲಭ್ಯಗಳು ಮತ್ತು ಅವರು ಯಾವ ರೀತಿಯಿಂದ ಆ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂಬುದನ್ನು ತಿಳಿಸಿಕೊಟ್ಟರು.  ಕಾರ್ಯಕ್ರಮದಲ್ಲಿ ಶಿಬಿರಾಧಿಕಾರಿಗಳಾದ  ಪ್ರತಿಭಾ.ಕೆ ಹಾಗೂ  ಶೀತಲ್ ಕುಮಾರ್ ಅವರು   ಶೈಕ್ಷಣಿಕ ಶಿಬಿರ ಉತ್ತಮವಾಗಲೆಂದು ಶುಭ ಹಾರೈಸಿದರು. ಸಂತ ಫಿಲೋಮಿನಾ ಕಾಲೇಜಿನ ಎಂ. ಎಸ್.ಡಬ್ಲ್ಯೂ ವಿಭಾಗದ ವಿದ್ಯಾರ್ಥಿ ನಾಯಕ ಮುಹಮ್ಮದ್ ಆಶಿಫ್ ಹಾಗೂ ನಾಯಕಿ ಪವಿತ್ರ ಎನ್ ಶೈಕ್ಷಣಿಕ ಶಿಬಿರದ ಯೋಜನೆಗಳ ಬಗ್ಗೆ ವಿವರವಾಗಿ ತಿಳಿಸಿದರು. ಶೈಕ್ಷಣಿಕ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಡೀಡ್ ಸಂಸ್ಥೆಯ ವಸತಿ ನಿಲಯದ ವಿದ್ಯಾರ್ಥಿಗಳು ಹಾಗೂ ಸಂತ ಫಿಲೋಮಿನಾ ಕಾಲೇಜಿನ ಪ್ರಥಮ ವರ್ಷದ ಎಂ.ಎಸ್.ಡಬ್ಲ್ಯೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಎಂ ಎಸ್ ಡಬ್ಲ್ಯೂ ವಿಭಾಗದ ವಿದ್ಯಾರ್ಥಿನಿಯರಾದ  ಪವಿತ್ರ ಎನ್ ಸ್ವಾಗತಿಸಿ, ದಿಶಾ ವಂದಿಸಿದರು ವೈಷ್ಣವಿ ಕಾರ್ಯಕ್ರಮವನ್ನು ನಿರೂಪಿಸಿದರು.