ಭಜನೆಯಿಂದ ಪ್ರತಿಯೊಂದು ಮನೆಗಳು ಬದಲಾವಣೆಗಳಾಗಿವೆ. ಭಜನೆ ಎಂಬುದು ನಮ್ಮೆಲ್ಲರ ಜೀವನದಲ್ಲಿ ಹೆಸರುಕಾಳು ಇದ್ದಂತೆ. ಇದಕ್ಕೆ ಜಾತಿ, ಪಕ್ಷ, ಪಂಥ , ಪ್ರಾಂತ್ಯ, ಪಂಗಡ, ಭಾಷೆ ಇದ್ಯಾವುದರ ಭೇದವಿಲ್ಲ ಎಂದು ವಜ್ರದೇಹಿ ಮಠ ಗುರುಪುರದ ಸ್ವಾಮೀಜಿಗಳಾದ ಶ್ರೀ ರಾಜಶೇಖರನಂದ ಸ್ವಾಮೀಜಿ ನುಡಿದರು.
ಅವರು ಭಗವದ್ಗೀತಾ ಭಜನಾ ಮಂಡಳಿ ಮತ್ತು ಮಹಿಳಾ ಬಳಗ ಬಡಕಬೈಲು ಹಾಗೂ ಕಾಜಿಲ ಇವರ ವತಿಯಿಂದ ಬಡಕಬೈಲಿನ ಕೃಷ್ಣ ನಗರದಲ್ಲಿ ನಡೆದ ಆಹ್ವಾನಿತ ತಂಡಗಳ ಕುಣಿತ ಭಜನಾ ಸ್ಪರ್ಧೆ ಮತ್ತು ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಕಾರ್ಯಕ್ರಮಲ್ಲಿ ಭಜಕರನ್ನು ಆರ್ಶೀವಚಿಸಿದರು.
ಚಲನಚಿತ್ರ ನಿರ್ಮಾಪಕ ಸತೀಶ್ ಬೈಕಂಪಾಡಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಆಹ್ವಾನಿತ ಕುಣಿತಾ ಭಜನಾ ಸ್ಫರ್ಧೆಯನ್ನು ಶ್ರೀ ರಾಮಕೃಷ್ಣ ತಪೋವನ ಪೊಳಲಿಯ ಶ್ರೀ ಚೈತನ್ಯಾನಂದ ಸ್ವಾಮೀಜಿ ಉದ್ಘಾಟಿಸಿದರು. ಬಡಕಬೈಲು ಮತ್ತು ಕಾಜಿಲ ಭಜನಾ ತಂಡದ ಮಕ್ಕಳು ಕುಣಿತ ಭಜನಾ ಪ್ರಸ್ತುತಿಯನ್ನು ಮಾಡುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಲಾಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯಕ್ ಉಳಿಪಾಡಿ ಗುತ್ತು ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ನಂತರ ಆಹ್ವಾನಿತ ೧೫ ತಂಡಗಳು ಕುಣಿತಾ ಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿದರು.
ಕಾರ್ಯಕ್ರಮದ ಸಭಾ ವೇದಿಕೆಯಲ್ಲಿ ಕರಾಟೆ, ಭಜನಾ ಕ್ಷೇತ್ರ, ಮಾಧ್ಯಮ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಹಾಗೂ ಕುಣಿತ ಭಜನೆಯಲ್ಲಿ ಬಹುಮಾನ ಪಡೆದ ಎಲ್ಲಾ ತಂಡಗಳಿಗೂ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಬಹುಮಾನವನ್ನು ನೀಡಲಾಯಿತು ಹಾಗೆಯೇ ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಬಹುಮಾನ ನೀಡಲಾಯಿತು.
ನಂತರ ಶ್ರೀದೇವಿ ನೃತ್ಯಾರಾಧನಾ ಕಲಾ ಕೇಂದ್ರ (ರಿ) ಪುತ್ತೂರು ಇವರ ನೃತ್ಯ ಗುರು ವಿದುಷಿ ರೋಹಿಣಿ ಉದಯ್ ಇವರ ಬಿಸಿ ರೋಡಿನ ಶಾಖೆಯ ಶಿಷ್ಯರಿಂದ ನೃತ್ಯ ರಂಜಿನಿ ಹಾಗೂ ವಿಠಲ್ ನಾಯ್ಕ್ ಕಲ್ಲಡ್ಕ ಬಳಗದವರಿಂದ ಗೀತ ಸಾಹಿತ್ಯ ಸಂಭ್ರಮ ,ಕಲಾ ಸಿಂಚನ ಮೋಹಿತ್ ಪೂಜಾರಿ ಅಡು ಇವರ ರಚನೆಯ ಸರಸ್ವತಿ ಕಲಾವಿದರು ಬಜ್ಪೆ ಇವರ ತುಳು ಸಾಮಾಜಿಕ ಹಾಸ್ಯಮಯ ನಾಟಕ ನಡೆಯಿತು.
ಸ್ಪರ್ಧೆಯಲ್ಲಿ ಸ್ಪರ್ಧಿಸಿದ 15 ತಂಡಗಳಿಗೂ ಸಿಕ್ಕ ಬಹುಮಾನದ ಸ್ಥಾನವನ್ನು ಗುರುತಿಸಿ ಟ್ರೋಫಿ ಮತ್ತು ನಗದು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಿಶೇಷ ಕುಣಿತ ಭಜನಾ ಪ್ರಸ್ತುತಿಯಾಗಿ ಜಿಲ್ಲೆಯಲ್ಲಿ ಪ್ರಸಿದ್ಧಿ ಪಡೆದ ಎರಡು ತಂಡಗಳಾದ ರಾಧಾಕೃಷ್ಣ ಭಜನಾ ಮಂಡಳಿ ನೀರ್ಕೆರೆ ಮತ್ತು ಮಕ್ಕಳ ಕುಣಿತ ಭಜನಾ ಮಂಡಳಿಯಾದ ಅಬ್ಬಗ್ಗ ದಾರಗ ಭಜನಾ ಮಂಡಳಿ ದೈಲಬೆಟ್ಟು ಕಲ್ಲಮುಂಡ್ಕೂರು ಇವರಿಂದ ಕುಣಿತ ಭಜನ ಪ್ರಸ್ತುತಿ ನಡೆಯಿತು ನಂತರ ಸ್ಥಳೀಯ ಪ್ರತಿಭೆಗಳಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಮಂಗಳೂರು ಕರಾವಳಿ ಭಜನಾ ಸಂಸ್ಕಾರ ಕೇಂದ್ರ ಸಮಿತಿಯ ಅಧ್ಯಕ್ಷ ಸಂತೋಷ್ ಶೆಟ್ಟಿ ಮೂಡುಶೆಡ್ಡೆ, ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಧಾ ಲೋಕೇಶ್, ಸ್ಥಳದಾನಿ ಮಲ್ಲಿಕಾ, ಉದ್ಯಮಿ ಸುಕೇಶ್ ಚೌಟ ಬಡಕಬೈಲ್, ಭಜನಾ ಗುರು ಅಶೋಕ್ ನಾಯ್ಕ್, ಉದ್ಯಮಿ ಚಂದ್ರಶೇಖರ ಶೆಟ್ಟಿ ಬಡಕಬೈಲ್, ಅಸರ್ ಬಾಟ್ಲಿಂಗ್ ನಾರಳದ ಮಾಲಕ ಚಂದ್ರಹಾಸ ಶೆಟ್ಟಿ ನಾರಳ, ವಿವೇಕ್ ಕೋಟ್ಯಾನ್, ಫರಂಗಿಪೇಟೆ ಸ್ಮಾರ್ಟ್ ಒನ್ ಕನ್ಸಂಕ್ಷನ್ ಪುಷ್ಪರಾಜ್ ಕಮ್ಮಾಜೆ ಈ ಸಂದರ್ಭದಲ್ಲಿದ್ದರು.
ತಂಡ ಬೆಳೆದು ಬಂದ ಹಾದಿಯನ್ನು ರಿತೇಶ್ ಕಾಜಿಲ ವಾಚಿಸಿದರು.
ಪ್ರವೀಣ್ ವಾಮಂಜೂರು ಮತ್ತು ಶ್ರೇಯಾ ಕಾಜಿಲ ಕಾರ್ಯಕ್ರಮ ನಿರ್ವಹಿಸಿದರು.