ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಹಾಗು ಬಡಕೋಡಿ ಗ್ರಾಮ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜ. 19 ರಂದು ಅನುಗ್ರಹ ಕಾoಪ್ಲೆಸ್ ನ ಬಳಿ ನಡೆಯಿತು.

ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಸೀತಾ ರಾಮ್ ರೈ. ಸಂಪನ್ಮೂಲ ವ್ಯಕ್ತಿಯಾಗಿ ಗಣೇಶ್ ಶೆಟ್ಟಿ, ಮಾಜಿ ಅಧ್ಯಕ್ಷರಾದ ಭೋಜ ಶೆಟ್ಟಿ,  ಸದಸ್ಯರಾದ ವಿಶಾಲ್ ಕೀರ್ತಿ ರೈ ಭೋಜ ಶೆಟ್ರು,  ನೂತನ ಅಧ್ಯಕ್ಷರಾದ ರವಿಚಂದ್ರ ಶೆಟ್ಟಿ ಉಪಸ್ಥಿತಿ ಇದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಬಂಟರ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ ವಹಿಸಿದ್ದರು. ಉಪಾಧ್ಯಕ್ಷರಾದ ಲೋಹಿತ್ ರೈ ಸ್ವಾಗತಿಸಿದರು. ರವಿಚಂದ್ರ ಶೆಟ್ಟಿ ಪ್ರಾಸ್ತಾವಿಕ ಭಾಷಣ ಮಾಡಿದರು. ದುರ್ಗಾಪ್ರಸಾದ್ ಶೆಟ್ಟಿ ಅವರು ವಂದಿಸಿದರು. ಕಾರ್ಯದರ್ಶಿ ಸುಜಾತ ಶೆಟ್ಟಿ. ಕಾರ್ಯಕ್ರಮ ನಿರೂಪಿಸಿದರು.