ಮಂಗಳೂರು: ಮಂಗಳೂರು ನಗರದ ವಿವಿಧ ಕಾಲೊನಿಗಳಲ್ಲಿ ಕ್ಯಾನ್ಸರ್, ನರ ರೋಗ, ಕೋವಿಡಿನಿಂದ ಮುಕ್ತರಾದ ಹಾಗೂ ಇನ್ನಿತರ ತೀವ್ರತರದ ರೋಗದಿಂದ ಜನರು ಬಳಲುತ್ತಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಆರ್ಥಿಕವಾಗಿ ಕಷ್ಟ ಅನುಭವಿಸುತ್ತಿರುವ ಮನೆಗಳಿಗೆ ಇಂದು ಭೇಟಿ ನೀಡಿ, ಕಾಂಗ್ರೆಸ್ ಹೆಲ್ಪ್‍ಲೈನ್ ವತಿಯಿಂದ ಕಿಟ್ಟುಗಳನ್ನು ವಿತರಿಸಿ, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು  ಮತ್ತು ಉತ್ತಮ ಚಿಕಿತ್ಸೆಯನ್ನು ನೀಡಲು ಬೇಕಾದ ವ್ಯವಸ್ಥೆ ಯನ್ನು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಯವರ ಜೊತೆ ಮಾತನಾಡಿ ವೈದ್ಯಕೀಯ ಆಸ್ಪತ್ರೆಗಳ ಜೊತೆ ಸಂಪರ್ಕವನ್ನು ಏರ್ಪಡಿಸಿ, ಧೈರ್ಯ ತುಂಬುವ ಕೆಲಸವನ್ನು ಮಾಡಿದರು. ಭೇಟಿಯ ಸಂದರ್ಭದಲ್ಲಿ ಅನೇಕ ರೋಗಿಗಳು ಈ ಹಿಂದೆ ವೆನ್ಲಾಕ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಕ್ಕೆ ಸಂಬಂಧಪಟ್ಟ ಡಯಾಲಿಸ್ ವ್ಯವಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈಗ ಕೋವಿಡ್ ಕಾರಣಕ್ಕಾಗಿ ಅವರಿಗೆ ಇರುವ ತೊಂದರೆಗಳ ಬಗ್ಗೆ ಗಮನಕ್ಕೆ ತಂದಾಗ, ಇದನ್ನು ಜಿಲ್ಲಾ ಆರೊಗ್ಯ ಅಧಿಕಾರಿ  ಮತ್ತು ಜಿಲ್ಲಾಡಳಿತಗಳ ಗಮನಕ್ಕೆ ತಂದು, ಕೂಡಲೇ ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ಐವನ್ ಡಿ ಸೋಜರವರು ಸೂಚಿಸಿದರು.

ಈ ಸಂಧರ್ಭದಲ್ಲಿ ಮಾಜಿ ಕಾಪೆರ್Çೀರೇಟರ್ ಶ್ರೀ ಭಾಸ್ಕರ್ ರಾವ್ ಹಾಗೂ ಇನ್ನಿತರ ಸ್ಥಳೀಯ ನಾಯಕರುಗಳು ಉಪಸ್ಥಿತರಿದ್ದರು.