ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಆ ಭಾಗದ ಪ್ರಭಾವಿ ನಾಯಕರಾಗಿದ್ದ ಕೆ. ಬಿ. ಶಾಣಪ್ಪ ಇಂದು ಮಧ್ಯಾಹ್ನ ನಿಧನರಾದರು.

ಮೂಲದಲ್ಲಿ ಕಮ್ಯೂನಿಸ್ಟ್‌ ನಾಯಕರಾಗಿದ್ದ ಅವರು ಶಹಾಬಾದ್ ಕ್ಷೇತ್ರದಿಂದ ವಿಧಾನ ಸಭೆಗೆ ಆಯ್ಕೆಯಾಗಿದ್ದರು. ‌ಎಸಿಸಿ ಸಿಮೆಂಟ್ ಕಾರ್ಖಾನೆಯ ಕೆಲಸಗಾರರನ್ನು ಸಂಘಟಿಸಿದ್ದರು. ಮುಂದೆ ಜನತಾ ಸೇರಿ ವಿಧಾನ ಪರಿಷತ್ ಸದಸ್ಯರಾಗಿ ಸಚಿವರಾಗಿದ್ದರು. ಅನಂತರ ಬಿಜೆಪಿ ಸೇರಿ ರಾಜ್ಯ ಸಭೆ ಸದಸ್ಯರಾಗಿದ್ದರು. 2018ರಲ್ಲಿ ಕಾಂಗ್ರೆಸ್ ಸೇರಿದ್ದರು.

ಹೈದರಾಬಾದ್ ಕರ್ನಾಟಕದ ಪ್ರಭಾವಿ ದಲಿತ ನಾಯಕರಾಗಿದ್ದ ಅವರು ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದವರು.