ಕಳೆದ 24 ಗಂಟೆಗಳಲ್ಲಿ ‌4,03,738 ಹೊಸ ಕೊರೋನಾ ಸೋಂಕು ಭಾರತದಲ್ಲಿ ಪತ್ತೆಯಾಗಿದ್ದು, 71% ಕೋವಿಡ್   ಹಾವಳಿ 10. ರಾಜ್ಯಗಳಲ್ಲಿ ಕಂಡುಬಂದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಮಹಾರಾಷ್ಟ್ರದಲ್ಲಿ 56,578, ಕರ್ನಾಟಕದಲ್ಲಿ 47,563 ಅತಿ ಹೆಚ್ಚು ಕೊರೋನಾ ಸೋಂಕು ಕಳೆದ 24 ಗಂಟೆಗಳಲ್ಲಿ ವರದಿಯಾಗಿದೆ. ಕ್ರಮವಾಗಿ ಹೆಚ್ಚು ಬಾಧಿತ ಇನ್ನು ಎಂಟು ರಾಜ್ಯಗಳೆಂದರೆ ದೆಹಲಿ, ಕೇರಳ, ತಮಿಳುನಾಡು, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ, ರಾಜಸ್ತಾನ ಮತ್ತು ಹರಿಯಾಣ ಎಂದು ಆರೋಗ್ಯ ‌ಸಚಿವಾಲಯ ಹೇಳಿದೆ. ಈ 24 ಗಂಟೆಗಳಲ್ಲಿ 4,092 ಕೊರೋನಾ ಸಾವು ಆಗಿರುವುದಾಗಿಯೂ ಹೇಳಲಾಗಿದೆ.