ಕೋವಿಡ್ ಕಾರಣಕ್ಕಾಗಿ 2020ರ ಅಕ್ಟೋಬರ್‌ನಲ್ಲಿ ಹೇರಿದ್ದ ತುರ್ತು ಪರಿಸ್ಥಿತಿಯನ್ನು ಸ್ಪೇನ್ ಸರಕಾರವು ಇಂದು ಕೊನೆಗೊಳಿಸಿ ಸುತ್ತೋಲೆ ಹೊರಡಿಸಿದೆ.

ಜನವರಿ ಹಿಂಚು ಮುಂಚಿನಲ್ಲಿ ಇಲ್ಲಿ ಕೊರೋನಾ ತುಂಬ ಉಲ್ಭಣಾವಸ್ಥೆಯಲ್ಲಿ ಇತ್ತು. ಈಗ ಕೂಡ ಅಲ್ಪ ಸ್ವಲ್ಪ ವಯ್ರಸ್ ಹಾವಳಿ ಇರುವುದರಿಂದ ಎಲ್ಲರೂ ಎಚ್ಚರಿಕೆಯಿಂದ ವ್ಯವಹರಿಸಲು ಒತ್ತಿ ಹೇಳಲಾಗಿದೆ.

ತುರ್ತು ಪರಿಸ್ಥಿತಿ ಸಮಯದಲ್ಲಿ ವಿಶೇಷ ಅನುಮತಿಯ ವಿನಾ ದೂರ ಪ್ರಯಾಣ ಮಾಡುವಂತಿರಲಿಲ್ಲ. ಕ್ರಿಸ್ಮಸ್‌‌ಗೆ ಸ್ವಲ್ಪ ವಿನಾಯಿತಿ ನೀಡಿದ್ದರೂ ಇತರ ಆಚರಣೆಗಳನ್ನು ತಡೆಹಿಡಿಯಲಾಗಿತ್ತು.