ಕಿಷ್ಕಿಂದೆ ಮತ್ತು ಹಂಪಿಗೆ ಆಗಾಗ ಪ್ರವಾಸ ಬರುತ್ತಿದ್ದ ಇಂಗ್ಲೆಂಡಿನ ರೋಸ್ ಮತ್ತು ಲೀಯಂ ಕೊರೋನಾ ಕಾಲದಲ್ಲಿ ಜನರನ್ನು ನೆನೆದು ಆಹಾರದ ಕಿಟ್ ಒದಗಿಸಿದ್ದಾರೆ.

ಗಂಗಾವತಿ ತಾಲೂಕಿನ ಹನುಮನಹಳ್ಳಿ ಮತ್ತು ಮೆಹಬೂಬ್‌ನಗರಗಳ ಎಲ್ಲರಿಗೂ ಒಂದು ತಿಂಗಳಿಗೆ ಅಗತ್ಯದ ಎಲ್ಲ ಬಗೆಯ ಆಹಾರ ಸಾಮಾಗ್ರಿಗಳು ಅಲ್ಲದೆ ಮಾಸ್ಕ್, ಸ್ಯಾನಿಟೈಸರ್ ಇತ್ಯಾದಿಗಳನ್ನು ‌ಈ ಇಂಗ್ಲೆಂಡಿನ ಜೋಡಿ ಒದಗಿಸಿದೆ. ಸ್ಥಳೀಯ ‌ಗೈಡ್ ಆಗಿರುವ ವಿರೂಪಾಕ್ಷರ ಮೂಲಕ ಇವುಗಳ ಹಂಚಿಕೆ ಏರ್ಪಾಡು ಮಾಡಿದ್ದಾರೆ.