ನಿಯಂತ್ರಣ ಕಳೆದುಕೊಂಡಿದ್ದ ಚೀನಾದ ರಾಕೆಟ್ ಲಾಂಗ್ ಮಾರ್ಚ್ 5ಬಿ ಹಿಂದೂ ಮಹಾಸಾಗರದಲ್ಲಿ ಬೀಳುವುದರೊಂದಿಗೆ ಲೋಕದ ಮೇಲೆ ಮುಸುಕಿದ್ದ ದೊಡ್ಡ ಆತಂಕ ದೂರವಾಯಿತು.

ಈ ರಾಕೆಟ್‌ನ ಮುಖ್ಯ ಭಾಗಗಳೆಲ್ಲ ಅಂತರದಲ್ಲಿ ಉರಿದು ಹೋಗಿದ್ದವು. ಭಾರೀ‌ ವೇಗದ ಅದು ಭೂಮಿಯ ದಟ್ಟ ವಾತಾವರಣವನ್ನು ಪ್ರವೇಶಿಸಿಸುವಾಗ ಉರಿಯ ಕಾರಣವಾಗಿ ಅದರ ವೇಗ 89 ಕಿಮೀಗೆ‌ ಇಳಿದಿತ್ತು.

ಬೆಳಿಗ್ಗೆ 10.24 ಗಂಟೆಗೆ ಭೂಮಿಯ ದಟ್ಟ ವಾತಾವರಣ ಪ್ರವೇಶಿಸಿ ಬರೇ ಬೂದಿಯಾಗಿ ಅದು ಮಾರಿಶಿಯಸ್ ಬಳಿ ಹಿಂದೂ ಮಹಾಸಾಗರದಲ್ಲಿ ಲೀನವಾಯಿತು. 72.47 ಡಿಗ್ರಿ ಪೂರ್ವ ರೇಖಾಂಶ ಮತ್ತು 2.65 ಡಿಗ್ರಿ ಉತ್ತರ ಅಕ್ಷಾಂಶ ಪ್ರದೇಶದಲ್ಲಿ ಅದು ಕಡಲಿನಲ್ಲಿ ಬಿದ್ದುದಾಗಿ ಚೀನಾ ಹೇಳಿದೆ.