ಒಲಿಂಪಿಕ್ಸ್ ಚಿನ್ನ ಗೆದ್ದ ಹಾಕಿ ತಂಡದಲ್ಲಿನ ಸಾಧಕರಾದ ರವೀಂದ್ರ ಪಾಲ್ ಮತ್ತು ಕೌಶಿಕ್ ಶನಿವಾರ ಕೋವಿಡ್ ಮೃತ್ಯು ಚುಂಬನಕ್ಕೆ ಬಲಿಯಾದರು.

1989ರ ಮಾಸ್ಕೋ ಒಲಿಂಪಿಕ್ಸ್‌ನ ಹಾಕಿ ಚಿನ್ನದ ಗೆಲುವಿನಲ್ಲಿ ಈ ಇಬ್ಬರ ಪಾತ್ರ ಸಹ ಅಮೂಲ್ಯವಾಗಿತ್ತು. ಎರಡು ವಾರಗಳಿಂದ ಕೊರೋನಾಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ರವೀಂದ್ರ ಪಾಲ್ ನಿನ್ನೆ ಮಧ್ಯಾಹ್ನ ಕೊನೆಯುಸಿರೆಳೆದರು.

ದೆಹಲಿ ಆಸ್ಪತ್ರೆಯಲ್ಲಿ ಕೊರೋನಾಕ್ಕೆ ಮದ್ದು ಪಡೆಯುತ್ತಿದ್ದ ಕೌಶಿಕ್ ನಿನ್ನೆ ಸಂಜೆ ಅಸು ನೀಗಿದರು. ರವೀಂದ್ರ ಪಾಲ್ ಎರಡು ಒಲಿಂಪಿಕ್ಸ್ ಮತ್ತಿತರ ಪಂದ್ಯಗಳಲ್ಲಿ ಭಾರತ ತಂಡದಲ್ಲಿ ಇದ್ದರು. ಕೌಶಿಕ್ ಹಾಕಿ ಕೋಚ್ ಆಗಿದ್ದು ಭಾರತ ಪುರುಷರ ಹಾಕಿ ತಂಡ 1998ರ ಏಶಿಯನ್ ಗೇಮ್ಸ್‌ನಲ್ಲಿ ಚಿನ್ನ ಗೆಲ್ಲಲು ಹಾಗೂ ಮಹಿಳಾ ಹಾಕಿ ತಂಡವು 2006ರ ಏಶಿಯನ್ ಗೇಮ್ಸ್‌ನಲ್ಲಿ ಕಂಚು ಗೆಲ್ಲುವಲ್ಲಿ ಮಾರ್ಗದರ್ಶಕರಾಗಿದ್ದರು.