ಮಂಗಳೂರಿನ ಐಸಿಸಿಸಿ- ಇಂಟಿಗ್ರೇಟೆಡ್ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರವನ್ನು ಕೋವಿಡ್ ವಾರ್ ರೂಮ್ ಆಗಿ ಬದಲಾಯಿಸಲಾಗಿದೆ.
ಮಂಗಳೂರಿನ ಸಮಗ್ರ ಕೋವಿಡ್ ಮಾಹಿತಿ ಮತ್ತು ಸಂಬಂಧಿಸಿದ ಇಲಾಖೆಗಳ ಸಮನ್ವಯತೆ ಸಾಧಿಸುವುದು ಇದರ ಗುರಿ. ಕೋವಿಡ್ ಸಹಾಯ ವಾಣಿ 1077 ಸದಾ ಜನ ಸೇವೆಗೆ ಲಭ್ಯ.
ಯಾವ ಆಸ್ಪತ್ರೆಯಲ್ಲಿ ಬೆಡ್ ಇದೆ, ಎಲ್ಲಿ ಲಸಿಕೆ, ಚಿಕಿತ್ಸೆ ಲಭ್ಯ ಇತ್ಯಾದಿ ವಿವರಗಳನ್ನು ಸಹ ಈ ವಾರ್ ರೂಮ್ ಮೂಲಕ ಪಡೆಯಬಹುದು. ಅದಕ್ಕೆ ಒಂದು ಆ್ಯಾಪ್ ತಯಾರಾಗುತ್ತಿದ್ದು ಇನ್ನೆರಡು ದಿನದಲ್ಲಿ ಸಿಗಲಿದೆ ಎಂದು ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಹೇಳಿದರು.