ಶನಿವಾರ ಭಾರತದ ಕೋವಿಡಾಘಾತಕ್ಕೆ ಸ್ವಲ್ಪ ಉಸಿರು ಬಿಡಲು ಅವಕಾಶವಾಯಿತು. ವಾರದ‌ ಸಾವೇರಿಕೆ ಸಂಖ್ಯೆ ನಿನ್ನೆ ಸ್ವಲ್ಪ ಕುಸಿತ ಕಂಡಿತು.

ನಿನ್ನೆಯ 24 ಗಂಟೆಗಳ ಅವಧಿಯಲ್ಲಿ 2,771 ಕೊರೋನಾ ಸಾವು ಭಾರತದಲ್ಲಿ ಆಗಿದೆ. ಒಟ್ಟು ಕೊರೋನಾ ಬಲಿ ಸಂಖ್ಯೆಯು 2,38,270 ಆಯಿತು.

ಇದೇ ಸಮಯದಲ್ಲಿ ನಿನ್ನೆಯ ಹೊಸ ಸೋಂಕು ಸಂಖ್ಯೆ 3.23 ಲಕ್ಷ. ಭಾರತದಲ್ಲಿ ‌ಕೋವಿಡ್‌ಗೆ ಈಡಾದವರ ಒಟ್ಟು ಸಂಖ್ಯೆ ‌2,18,92,676 ಆಯಿತು.

ಒಟ್ಟು ಸಾವಿನಲ್ಲಿ ಮಹಾರಾಷ್ಟ್ರ 74,413, ದೆಹಲಿ 18,939, ಕರ್ನಾಟಕ 17,804 ಮೊದಲ ಮೂರು ಸ್ಥಾನಗಳಲ್ಲಿ ‌ಇವೆ.

ದೆಹಲಿಯ ಲುಟೈನ್ಸ್‌ನಲ್ಲಿರುವ ಅಶೋಕ ಹೋಟೆಲನ್ನು ದೆಹಲಿಯ ನ್ಯಾಯಾಧೀಶರು, ನ್ಯಾಯಾಂಗ ಸಿಬ್ಬಂದಿಯ ಕೋವಿಡ್ ಚಿಕಿತ್ಸೆಯ ಆಸ್ಪತ್ರೆಯಾಗಿ ಬದಲಿಸಲಾಗಿದೆ.


ಜಾಗತಿಕ ಕೊರೋನೇಟು

ಜಗತ್ತಿನಲ್ಲಿ ಒಟ್ಟು ಕೊರೋನಾಕ್ಕೆ ಬಲಿಯಾದವರ ಸಂಖ್ಯೆಯು ಮೂವತ್ತೆರಡು ಲಕ್ಷದ ತೊಂಬತ್ತಾರು ಲಕ್ಷ ದಾಟಿದ್ದು ಹೊಸ ವಾರದಲ್ಲಿ ಸಾವು ಸಂಖ್ಯೆ 33 ಲಕ್ಷ ಎಂಬ ನೋವು ಜನರನ್ನು ಕಾಡಿದೆ.

ಜಗತ್ತಿನಲ್ಲಿ ಕೊರೋನಾ ಸೋಂಕು ಕಂಡವರ ಸಂಖ್ಯೆಯು   15.83 ಕೋಟಿ ದಾಟಿ ನಡೆದಿದ್ದು ಹೊಸ ವಾರದ ಆರಂಭದಲ್ಲಿ 16   ಕೋಟಿಯ ಕರಾಳ ಲೆಕ್ಕ ಎದುರಾಗುತ್ತಲಿದೆ.

ಕೊರೋನಾ ಸೋಂಕು ತಗುಲಿದವರ ಲೆಕ್ಕಾಚಾರದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನ, ಭಾರತ, ಬ್ರೆಜಿಲ್ ಮೊದಲ ಮೂರು ಸ್ಥಾನಗಳಲ್ಲಿ ಇದ್ದು, ಕ್ರಮವಾಗಿ ಈ ದೇಶಗಳಲ್ಲಿ ಕೋವಿಡ್ ಪಾಸಿಟಿವ್ ಆದವರ ಒಟ್ಟು ಸಂಖ್ಯೆಯು 3,34,54,581; 2,22,95,911; 1,51,50,628 ತಲುಪಿದೆ.