ಭಾನುವಾರ ಮಂಗಳೂರಿನಲ್ಲಿ ಬಂದ್ ವಾತಾವರಣ ಇತ್ತು. ಸಂಪೂರ್ಣ ಲಾಕ್‌ಡೌನ್‌ಗೆ ಜನಸಾಮಾನ್ಯರು ಮಣೆ ಹಾಕಲು ಸಿದ್ಧರಾಗಿರುವುದು ಕಂಡು ಬಂತು.
ಜಿಲ್ಲಾಡಳಿತವು ಬೆಳಗ್ಗಿನ ಅವಧಿಯಲ್ಲಿ ಏನಾದರೂ ಕೊಂಡುಕೊಳ್ಳಲು ಹೋಗುವಾಗ ನಡೆದುಕೊಂಡು ಹೋಗಿ, ವಾಹನ ಬಳಸಬೇಡಿ ಎಂದಿದ್ದಾರೆ. ಮೊನ್ನೆಯಷ್ಟು ಅಲ್ಲದಿದ್ದರೂ ತೆಳುವಾಗಿ ವಾಹನಗಳು ಓಡಾಡುತ್ತಿದ್ದವು. ಉಳಿದಂತೆ ಲಾಕ್‌ಡೌನ್ ಯಶಸ್ಸಿನತ್ತ ಮಂಗಳೂರು ಹೆಜ್ಜೆ ಹಾಕುತ್ತಿರುವುದು ಸ್ಪಷ್ಟ.
ದ.ಕ.ದಲ್ಲಿ ಮುಂದುವರಿದ ಕೊರೋನಾ ಒದೆತ
ನಿನ್ನೆಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೋವೆಲ್ ಕೋವಿಡ್19ರಿಂದ ಮೂರು ಜನರು ಮರಣವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಕೊರೋನಾದ ಒದೆಗೆ ಸಿಲುಕಿ ಸತ್ತವರ ಒಟ್ಟು ಸಂಖ್ಯೆ 783 ಆಯಿತು. ನಿನ್ನೆ ದ.ಕ.ದಲ್ಲಿ ಪಾಸಿಟಿವ್‌ನಿಂದ ನೊಂದವರ ಸಂಖ್ಯೆಯು 1,513.