ಆವಿಗೆ, ಸಾಗರ ತಾಲೂಕುನಲ್ಲಿ ಐದು ದಿನಗಳ ಪಂಚ ಕಲ್ಯಾಣ ಮಹೋತ್ಸವ ಫೆ. 17 ರಿಂದ ಫೆ. 21 ರ ವರೆಗೆ ವೈಭವದಿಂದ ಹಮ್ಮಿಕೊಳ್ಳಲಾಗಿದ್ದು ನಾಲ್ಕನೇ ದಿನ ರಾಜ್ಯಾಭಿಷೇಕ ಕಲ್ಯಾಣ ಹಾಗೂ  ದೀಕ್ಷಾ ಕಲ್ಯಾಣ ಫೆ. 20 ರಂದು ಗುರುವಾರ ಸಂಜೆ 4.00 ಗಂಟೆಗೆ ಚಾರಿತ್ರ ಚಕ್ರವರ್ತಿ 108 ಶಾಂತಿ ಸಾಗರ ಮುನಿ ಮಹಾರಾಜ್ ಆಚಾರ್ಯ ಪದರೋಹಣ ಶತಾಬ್ದಿ ಮಹೋತ್ಸವ ಹಾಗೂ ಆಚಾರ್ಯ 108 ವಿದ್ಯಾನಂದ ಮುನಿ ಮಹಾರಾಜ್ ಜನ್ಮ ಶತಾಬ್ದಿ ಮಹೋತ್ಸವದ ಕಾರ್ಯಕ್ರಮವನ್ನು ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯ ಪಟ್ಟಾಚಾರ್ಯ ವರ್ಯ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಜಗದ್ಗುರು ಡಾ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ ಸಾಗರ ಶಾಸಕ ಬೇಳೂರು ಗೋಪಾಲ ಕೃಷ್ಣ  ಉದ್ಘಾಟಿಸಿದರು. 

ಹಾಗೂ ಜೈನ ಧರ್ಮ ಸರ್ವ ಧರ್ಮದ ಜತೆ ಉತ್ತಮ ಭಾಂಧವ್ಯ ಹೊಂದಿದೆ. ಅಹಿಂಸೆಯ ಬಗ್ಗೆ ಹೆಚ್ಚು ಕಾಳಜಿ ವಹಿಸಿದೆ. ಆಚಾರ್ಯ ವಿದ್ಯಾನಂದರು ದೇಶದ ನಾನಾ ಭಾಗಗಳಲ್ಲಿ ಧರ್ಮ ಪ್ರಚಾರ ಮಾಡಿ ವಿಶ್ವ ಸಂತರಾಗಿದ್ದಾರೆ ಮೂಡುಬಿದಿರೆ ಸ್ವಾಮೀಜಿ ಕುಗ್ರಾಮದಲ್ಲಿ ಇಂತಹ ಮಹಾತ್ಮರ ಬಗ್ಗೆ ಪಂಚ ಕಲ್ಯಾಣ ಬಿಂಬ ಪ್ರತಿಷ್ಠಾಪನೆ ಸಂಧರ್ಭ ಯತಿಸ್ಮರಣೆ ಮೂಲಕ ಧರ್ಮ ಪ್ರಭಾವ ಮಾಡುತ್ತೀರುದು ಸಂತೋಷ ಎಂದರು. ಸ್ವಾಮೀಜಿ ಧ್ವಯರು ಶಾಸಕರು, ದಾನಿಗಳು ಗಣ್ಯರನ್ನು ಸನ್ಮಾನಿಸಿ ಹರಸಿ ಆಶೀರ್ವಾದ ಮಾಡಿದರು.

ಹುಂಚ ಸ್ವಾಮೀಜಿ ಆಶೀರ್ವಾದ ನೀಡಿ ಪಂಚ ಕಲ್ಯಾಣದಲ್ಲಿ ಪರಮಾತ್ಮರ ಗುಣಗಾನ ಪ್ರತಿಷ್ಠಾಪನೆ ನಡೆಯುತ್ತದೆ ಎಂದರು. ಸವಳ್ನಾಡು ಸೀಮೆ ಗುರುಗಳಾದ ಅಧ್ಯಕ್ಷತೆ ವಹಿಸಿದ ಮೂಡುಬಿದಿರೆ ಸ್ವಾಮೀಜಿ ಭಾರತೀಯ ಸನಾತನ ಸಂಸ್ಕೃತಿಯಲ್ಲಿ ತ್ಯಾಗ ಹಾಗೂ ತ್ಯಾಗಿ ಗಳಿಗೆ ಹೆಚ್ಚು ಮಹತ್ವ ನೀಡಲಾಗಿದೆ. ಧರ್ಮ ಹಾಗೂ ಧಾರ್ಮಿಕ ಭಾವನೆ ಸರ್ವಜೀವ ದಯಾ ಪರವಾಗಿದೆ. ಬದುಕು ಬದುಕಲು ಬಿಡಿ ಅನ್ನುವ ಸಂದೇಶ ಸರ್ವರನ್ನು ಸಮಾನತೆಯಲ್ಲಿ ಕಾಣುವ ಸರ್ವೋದಯ ಧರ್ಮ ತೀರ್ಥದ ಕೊಡುಗೆ ತೀರ್ಥoಕರ ಕೊಡುಗೆ ಎಂದು ನುಡಿದರು. 

ಪಂಚ ಕಲ್ಯಾಣ ಸಮಿತಿ ಅಧ್ಯಕ್ಷ ವಿಜಯೇಂದ್ರ ಚಕ್ಕೊಡು ಶುಭ ಹಾರೈಸಿದರು. ನಾಗರಾಜ್ ಬೊಬ್ಬಿಗೆ ಸ್ವಾಗತಿಸಿದರು.

ಎಸ್ ಎಲ್ ನಾಗರಾಜ್ ಸಸಿಗೊಳ್ಳಿ, ಜಿ.ಟಿ ಸತ್ಯ ನಾರಾಯಣ ಕರೂರ್, ಪ್ರೇಮಾ ಸಂತೋಷ್ ಭಾನುಕುಳಿ ಉಪಾಧ್ಯಕ್ಷರು ತುಮರಿ ಗ್ರಾಮ ಪಂಚಾಯತು ಶಿವಮೊಗ್ಗ ಯಶೋಧರ್ ಹೆಗ್ಡೆ, ರತ್ನ ಕುಮಾರ್ ಹಾಳು ಸಸಿ ಉಪಸ್ಥಿತರಿದ್ದರು.